ಹೊಸಬೂದನೂರು ಸೊಸೈಟಿ ಚುನಾವಣೆಯಲ್ಲಿ ಕೈ ಪ್ರಾಬಲ್ಯ: ನಿರ್ದೇಶಕರನ್ನು ಅಭಿನಂದಿಸಿದ ಶಾಸಕ ರವಿಕುಮಾರ್ ಗಣಿಗ

Congress dominates Hosaboodanur Society elections Mandya
Published on

ಮಂಡ್ಯ: ತಾಲೂಕಿನ ಹೊಸ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಒಟ್ಟು 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಜೆಡಿಎಸ್‌ನ ಇಬ್ಬರು ಗೆಲುವು ಸಾಧಿಸಿದ್ದಾರೆ. ಸಾಲಗಾರ ಕ್ಷೇತ್ರದ ಸಾಮಾನ್ಯ ಕ್ಷೇತ್ರದಿಂದ ಬಿ.ಎನ್.ರಘು, ಕೆ.ಪುನೀತ್, ಬಿ.ಎಸ್.ಅರುಣ್‌ಕುಮಾರ್, ಬಿ.ಎಸ್.ಮಂಜು, ಬಿ.ಟಿ.ಸುರೇಶ್, ಬಿ.ಎನ್.ರಾವಳಯ್ಯ(ಹಿಂದುಳಿದ ವರ್ಗ ಎ), ಬಿ.ಸಿ.ರಾಜಶೇಖರ (ಹಿಂದುಳಿದ ವರ್ಗ ಬಿ), ಬಿ.ಎಂ.ಮಂಚದಾಸು (ಪ.ಜಾತಿ), ವೀರಮ್ಮ(ಮಹಿಳಾ ಮೀಸಲು), ಬಿ.ಸಿ.ಲತಾ(ಮಹಿಳಾ ಮೀಸಲು), ಸಾಲಗಾರರಲ್ಲದ ಕ್ಷೇತ್ರದಿಂದ ಬಿ.ಎಸ್.ಚೈತ್ರೇಶ್ ಇವರು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾದ ನೂತನ ನಿರ್ದೇಶಕರು ಸೋಮವಾರ ನಗರದಲ್ಲಿ ಶಾಸಕ ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಿದರು. ಇದೇ ವೇಳೆ ನಿರ್ದೇಶಕರನ್ನು ಸನ್ಮಾನಿಸಿದ ಶಾಸಕ, ರಾಜಕೀಯವನ್ನು ಬದಿಗೊತ್ತಿ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net