

ಶಿವಮೊಗ್ಗ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರ ಜನ್ಮದಿನವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿ ಸೇರಿದಂತೆ ನಗರದ ವಿವಿಧೆಡೆ ಭಾನುವಾರ ಆಚರಿಸಲಾಯಿತು. ಬೆಳಗ್ಗೆ ಗೋಪಾಳ ದ್ರೌಪದಮ್ಮ ದೇವಸ್ಥಾನದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು.
ಮೆಗ್ಗಾನ್ ಆಸ್ಪತ್ರೆ, ಸಹ್ಯಾದ್ರಿ ಕಾಲೇಜು ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಅನ್ನಸಂತರ್ಪಣೆ, ಶಾರದಾ ದೇವಿ ಅಂಧರ ವಿಕಾಸ ಶಾಲೆ, ಗೋಪಾಳದ ಜೀವನ ಸಂಜೆ ವೃದ್ಧಾಶ್ರಮ, ಆಲ್ಕೊಳದ ತಾಯಿ ಮನೆ, ಕಾಶಿಪುರದ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಿಷನ್ ಕಾಂಪೌಂಡ್‌ನ ಹ್ಯಾಪಿ ಹೋಮ್ ಮತ್ತು ಆಶಾಕಿರಣ ಮಕ್ಕಳೊಂದಿಗೆ ಸುಂದರೇಶ್ ಭಾಗಿಯಾಗಿ ಜನ್ಮದಿನ ಆಚರಿಸಿಕೊಂಡರು. ಮುಖಂಡರು, ಕಾರ್ಯಕರ್ತರು ಭೇಟಿಯಾಗಿ ಸುಂದರೇಶ್ ಅವರಿಗೆ ಶುಭಾಶಯ ಕೋರಿದರು.