ಕಾಂಗ್ರೆಸ್‌ನಿಂದಲೇ ಅಂಬೇಡ್ಕರ್‌ಗೆ ಅಗೌರವ

15 SRT 2
Published on

ಶಿರಹಟ್ಟಿ: ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರವಾಗಿ ಅಪಮಾನಿಸಿ, ಅವರ ಅರ್ಹತೆ, ಪಾಂಡಿತ್ಯವನ್ನು ಗೌರವಿಸದೆ ಅವರನ್ನು ರಾಜಕೀಯವಾಗಿ, ಸಾಮಾಜಿಕವಾಗಿ ತುಳಿದ ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ ಎಂದು ಶಾಸಕ ಡಾ. ಚಂದ್ರು ಕೆ.ಲಮಾಣಿ ಆರೋಪಿಸಿದರು.

ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಶಿರಹಟ್ಟಿ ಘಟಕದ ವತಿಯಿಂದ ಏರ್ಪಡಿಸಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಬಿಜೆಪಿಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಪಕ್ಷ ಆರಂಭಿಸಿರುವ ಶ್ರೇಷ್ಠ ಸಂವಿಧಾನ ಗೌರವ ಅಭಿಮಾನವನ್ನು ರಾಜ್ಯದಲ್ಲಿಯೂ ಯಶಸ್ವಿಗೊಳಿಸಬೇಕು ಎಂದರು. ವಿಧಾನ ಪರಿಷತ್ ಶಾಸಕರ ಎಸ್.ವಿ. ಸಂಕನೂರ, ಶಿರಹಟ್ಟಿ ಮಂಡಲ ಅಧ್ಯಕ್ಷರ ಸುನಿಲ ಮಹಾಂತಶೆಟ್ಟರ, ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net