ಅಮಗಾಂವಗೆ ಕಾಂಗ್ರೆಸ್ ನಿಯೋಗ ಭೇಟಿ

Oplus_16777216
Oplus_16777216
Published on

ಖಾನಾಪುರ: ಭೀಮಗಢ ಅಭಯಾರಣ್ಯದಿಂದ ಅಮಗಾಂವ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ಸಲಹೆ ಮೇರೆಗೆ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್‌ನ ನಿಯೋಗವು ಗ್ರಾಮಸ್ಥರನ್ನು ಈಚೆಗೆ ಭೇಟಿ ಮಾಡಿ ಅಹವಾಲು ಆಲಿಸಿತು. ಅಮಗಾಂವ ಗ್ರಾಮಸ್ಥರು ದಟ್ಟ ಕಾಡಿನಿಂದ ಹೊರಬರಲು ನಿರ್ಧರಿಸಿದ್ದಾರೆ. ಆದರೆ, ಸರ್ಕಾರದಿಂದ ಕುಟುಂಬಕ್ಕೆ ಕೇವಲ ೧೫ ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದು ಬಹಳ ಕಡಿಮೆಯಾಗಿದ್ದು, ಪರ್ಯಾಯ ಸ್ಥಳ, ಮೂಲ ಸೌಲಭ್ಯ ಮತ್ತು ೧೫ ಲಕ್ಷ ರೂ. ನೀಡಿದರೆ ಮಾತ್ರ ಸ್ಥಳಾಂತರಗೊಳ್ಳುತ್ತೇವೆ ಎಂದು ಗ್ರಾಮಸ್ಥರು ಕಾಂಗ್ರೆಸ್ ನಿಯೋಗಕ್ಕೆ ಮನವರಿಕೆ ಮಾಡಿದರು.

ಗ್ರಾಮಸ್ಥರ ಬೇಡಿಕೆ ಆಲಿಸಿದ ನಿಯೋಗ ಬೇಡಿಕೆಗಳಿಗೆ ಬೆಂಬಲಿಸಿ, ಈ ಕುರಿತು ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ವರದಿ ಸಲ್ಲಿಸಿ ಕ್ರಮ ಜರುಗಿಸಲು ಕೋರುವುದಾಗಿ ಭರವಸೆ ನೀಡಿತು.

ಇದೇ ವೇಳೆ ಭೀಮಗಢ ಅರಣ್ಯಾಧಿಕಾರಿ ಸೈಯದ್ ನದಾಫ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಗ್ರಾಮಸ್ಥರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಈಶ್ವರ ಬೋಬಾಟೆ, ದೀಪಕ ಕವಠಣಕರ, ಸುರೇಶ ಭಾವು, ಪತ್ರಕರ್ತ ವಾಸುದೇವ ಚೌಗುಲೆ, ಕದಂ, ಅಮಗಾಂವ ಗ್ರಾಮದ ಯುವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net