

ಬಳ್ಳಾರಿ: ತಾಲೂಕಿನ ಗಡಿಭಾಗದ ಹಲಕುಂದಿ ಗ್ರಾಮದಿಂದ ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಲಿರುವ ಯುವ ನಾಯಕ ರಾಹುಲ್‌ಗಾಂಧಿಗೆ 500 ರಿಂದ 700 ಜನರಿರುವ ಕಲಾ ತಂಡಗಳಿಂದ ಅದ್ದೂರಿ ಸ್ವಾಗತ ಮಾಡಲಾಗುವುದು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.
ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ದೇಶವನ್ನು ಛಿದ್ರ ಮಾಡಿದ್ದಾರೆ. ಜನರ ಮನಸ್ಸು ಒಡೆದಿದ್ದಾರೆ. ಅಂತಹ ಮನಸುಗಳನ್ನು ಒಂದು ಮಾಡಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಜೋಡೋ ಜಾತ್ರೆ ನಡೆಯುತ್ತಿದೆ. ಶನಿವಾರ ಬೆಳಗ್ಗೆ ಕಲಾತಂಡಗಳು ಸೇರಿದಂತೆ ಸಾವಿರಾರು ದಲಿತ ಮಹಿಳೆಯರು, ಯುವಕರು, ಮಕ್ಕಳು, ಮುಖಂಡರು ರಾಹುಲ್ ಗಾಂಧಿಯನ್ನು ಸ್ವಾಗತಿಸಲಿದ್ದಾರೆ. 10ರ ಸುಮಾರಿಗೆ ನಗರಕ್ಕೆ ರಾಹುಲ್ ಆಗಮಿಸಲಿದ್ದಾರೆ. ಇಲ್ಲಿನ ಕಮ್ಮಭವನದಲ್ಲಿ ತುಸು ಹೊತ್ತು ವಿಶ್ರಾಂತಿ ತೆಗೆದುಕೊಂಡು, ಮಧ್ಯಾಹ್ನ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ನಗರದಲ್ಲಿ ಸಮಾವೇಶ ಹಮ್ಮಿಕೊಂಡಿರುವುದು ನಮ್ಮಲ್ಲೆರ ಪುಣ್ಯ. ಕಾರ್ಯಕ್ರಮದಲ್ಲಿ ಐದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ, ಒಂದೂವರೆ ಲಕ್ಷ ಜನಕ್ಕೆ ಅಡುಗೆ ತಯಾರಿ ಮಾಡುತ್ತಿದ್ದೇವೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ ಸೇರಿದಂತೆ ರಾಯಚೂರಿನ ಸಿಂಧನೂರು ಮತ್ತು ಮಸ್ಕಿಯಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅವರಿಗೆ ಬಸ್‌ನಲ್ಲಿಯೇ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಉಳಿದಂತೆ ಬೇರೆ ಬೇರೆ ಮುಖಂಡರು ಕೂಡ ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣಗಳಿರುವುದು ನಿಜ. ಆದರೆ, ಎಲ್ಲರೂ ಒಟ್ಟಾಗಿದ್ದೆ ಸಮಾವೇಶ ಯಶಸ್ವಿಗೊಳಿಸಲಿದ್ದೇವೆ. ಅಕಾಂಕ್ಷಿಗಳಿರಲಿ, ಕಾರ್ಯಕರ್ತರಿರಲಿ, ಪಕ್ಷದ ಅಭಿಮಾನಿಗಳಿರಲಿ ಎಲ್ಲರೂ ಫ್ಲೆಕ್ಸ್ ಹಾಕಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ.| ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ.