

ಸವಣೂರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ( ಹೆಸ್ಕಾಂ) ದ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಅಜಂಪೀರ್ ಖಾದ್ರಿ ನೇಮಕಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೋಮವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪುರಸಭೆ ಸದಸ್ಯ ಶಿವಕುಮಾರ ಅಡವಿಸ್ವಾಮಿಮಠ ಮಾತನಾಡಿ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ಪಕ್ಷಕ್ಕಾಗಿ ಕಳೆದ 24 ವರ್ಷಗಳಿಂದ ನಿರಂತರ ಶ್ರಮಿಸಿದ ಫಲವಾಗಿ ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾಸೀರ ಅಹ್ಮದಖಾನ್ ಪಠಾಣ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದನ್ನು ಗುರುತಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರ ಉತ್ತಮ ಹಾಗೂ ಉನ್ನತ ಹುದ್ದೆ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ಮಹಾಲಿಂಗಪ್ಪ ಕುಂಬಾರ, ಗೋಪಾಲ ಮುಂಡಗೋಡ, ಖಲಂದರಅಹ್ಮದ ಗೌಡಗೇರಿ, ಬಾಬನಸಾಬ್ ರಾಯಚೂರ, ಇಸ್ಮಾಯಿಲ್ ಅಕ್ಕಿ, ನೂರ ಮೈಲಾನವರ, ಇಕ್ಬಾಲ್ ಹಳದಿ, ಶಫಿ ಸೋಲ್ಲಾಪೂರಿ, ರಫೀಕ್ ಮುಲ್ಲಾ, ಡಿ.ಯು. ಅಜ್ಜಣ್ಣನವರ, ಇತರರಿದ್ದರು.