ಉಪಚುನಾವಣೆ ಸೋಲಿನ ಬಳಿಕ ಕುಸುಮಾ ಮೊದಲ ಪ್ರತಿಕ್ರಿಯೆ ಹೀಗಿದೆ...

kusuma
Published on

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ, ಜನರು ಕೊಟ್ಟಿರುವ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆಂದು ತಿಳಿಸಿದ್ದಾರೆ.

ಫೇಸ್​ಬುಕ್​ ಮೂಲಕ ಜನರಿಗೆ ಸಂದೇಶ ರವಾನಿಸಿರುವ ಕುಸುಮಾ, ಕಾಂಗ್ರೆಸ್​ ಪಕ್ಷದ ಮೂಲಕ ನನ್ನನ್ನು ಬೆಂಬಲಿಸಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು. ಮತಯಾಚನೆಗೆ ಮನೆಬಾಗಿಲಿಗೆ ಬಂದಾನ ಮನೆಮಗಳಂತೆ ಬರಮಾಡಿಕೊಂಡು ಕುಂಕುಮ ಇಟ್ಟು, ಹೂ ಮುಡಿಸಿ, ಉಡಿ ತುಂಬಿ ನೀವು ತೋರಿದ ಪ್ರೀತಿಗೆ ಋಣಿಯಾಗಿದ್ದೇನೆ.

ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರ ಎಂದೆಂದಿಗೂ ನನ್ನ ಕರ್ಮಭೂಮಿ. ಎಂದಿನಂತೆ ನಿಮ್ಮೊಂದಿಗಿದ್ದು, ನನ್ನ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುವ ಮೂಲಕ ನೊಂದವರ ದನಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net