

ಕಾರವಾರ: ಒಂದಾಗಿರುವ ಭಾರತ ಮಾತೆಯ ಮಕ್ಕಳನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇರ್ಪಡಿಸಲು ಹೊರಟಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ದೂರಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜನಿ ನಿಂಬಾಳಕರ್ ಪರ ತಾಲೂಕಿನ ಶಿರವಾಡ ಬಂಗಾರಪ್ಪ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೆ ನೋಟ್‌ಗಳನ್ನು ಅಮಾನ್ಯ ಮಾಡಿ ಜನರಿಗೆ ತೊಂದರೆ ನೀಡಿದರು. 15 ದಿನದಲ್ಲಿ ಕಪು÷್ಪ ಹಣ ಹಿಡಿಯುತ್ತೇವೆ ಎಂದರು. ಆದರೆ, ಶೇ.99.99 ರಷ್ಟು ಹಣ ನಗದಾಗಿ ಪರಿವರ್ತನೆಯಾಯಿತು. ನಂತರ ಸುಮ್ಮ ಸುಮ್ಮನೇ ಲಾಕ್‌ಡೌನ್ ಮಾಡಿ ಜನರನ್ನು ಸತಾಯಿಸಲಾಯಿತು. ಅಗತ್ಯ ಸೇವೆ, ವಸ್ತುಗಳ ಮೇಲೆ ಜಿಎಸ್‌ಟಿ ಹೇರಲಾಯಿತು ಎಂದು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಟ್ಟರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ಕೊಟ್ಟಿದ್ದು. ಸಿದ್ದರಾಮಯ್ಯ ಸರ್ಕಾರ 1978 ರ ಪೂರ್ವದ ಅತಿಕ್ರಮಣಗಳನ್ನು ಮುಟ್ಟುವಂತಿಲ್ಲ ಎಂದು ಆದೇಶ ಹೊರಡಿಸಲಾಯಿತು. ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆಗಳ ಚೇಷ್ಟೆ ಮಾಡಿ, ಈಗ ಅವರೂ ಗ್ಯಾರಂಟಿ ಶಬ್ದ ಬಳಸುತ್ತಿದ್ದಾರೆ ಎಂದು ಕಾಲೆಳೆದರು.
ಎಂಸಿಎ ಚೇರ್ಮನ್ ಸತೀಶ ಸೈಲ್ ಮಾತನಾಡಿ, ಕಾಂಗ್ರೆಸ್ 5 ಗ್ಯಾರಂಟಿ ಕಾರ್ಡ್ಗಳನ್ನು ಕೊಟ್ಟು ಅಽಕಾರಕ್ಕೆ ಬಂತು. 100 ದಿನಗಳ ಒಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಈಗ ಪಂಚ ನ್ಯಾಯದ ಭರವಸೆಗಳೊಂದಿಗೆ ಬರುತ್ತಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದರೆ ಜನರ ಕೈಗೆ ಪ್ರತಿ ತಿಂಗಳು ಹತ್ತುವರೆ ಸಾವಿರ ಸಿಗಲಿದೆ. ಜನ ವಿಚಾರ ಮಾಡಿ, ಅಂಜಲಿ ಅವರನ್ನು ಬೆಂಬಲಿಸಿ ಎಂದರು. ಮಾಜಿ ಸಚಿವ ರಮಾನಾಥ ರೈ, ನಿವೇದಿತ ಆಳ್ವಾ, ಪ್ರಭಾಕರ ಮಾಳ್ಸೇಕರ್, ಕೆ.ಶಂಭು ಶೆಟ್ಟಿ , ಸಮೀರ ನಾಯ್ಕ ಇತರರು ವೇದಿಕೆಯಲ್ಲಿದ್ದರು.