ಕಾಂಗ್ರೆಸ್ ಹಿಂದುಳಿದವರ ಪರವೆಂಬುದು ಸಾಬೀತು

Congress, C.B.Aski, Muddebihal, By-Election, BJP, Chief Minister Deputy Chief Minister, C.S. Nadagowda, Shiggaonvi,
ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗುರು ತಾರನಾಳ, ಸಿ.ಬಿ.ಅಸ್ಕಿ, ಸದ್ದಾಂ ಕುಂಟೋಜಿ, ಮಹಿಬೂಬ ಗೊಳಸಂಗಿ, ಅಪ್ಪು ದೇಗಿನಾಳ ಇತರರಿದ್ದರು.
Published on

ಮುದ್ದೇಬಿಹಾಳ: ರಾಜ್ಯದ ಮೂರೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಪಕ್ಷ, ಸರ್ಕಾರ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಪರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಂಗ್ರೆಸ್ ಮುಖಂಡ, ಅಸ್ಕಿ ೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ಉಪಚುನಾವಣೆ ಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ನಮ್ಮ ಸರ್ಕಾರದ ಮೇಲೆ ಏನೇ ಸುಳ್ಳು ಅಪವಾದ ಹೊರಿಸಿದರೂ, ಅಪಪ್ರಚಾರ ನಡೆಸಿದರೂ ಮತದಾರರು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಈ ಗೆಲುವು ಭವಿಷ್ಯದ ಜಿಪಂ, ತಾಪಂ ಚುನಾವಣೆಗಳ ದಿಕ್ಸೂಚಿಯಾಗಿದೆ. ಶಾಸಕ ಸಿ.ಎಸ್.ನಾಡಗೌಡರು ಶಿಗ್ಗಾಂವಿಯಲ್ಲಿ ಪ್ರಚಾರ ನಡೆಸಿ ನಮ್ಮ ಭಾಗದವರ ಪ್ರಾತಿನಿಧಿತ್ವ ವಹಿಸಿ ಗೆಲುವು ತಂದುಕೊಡುವಲ್ಲಿ ಒಬ್ಬರಾಗಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಪಂ ಮಾಜಿ ಅಧ್ಯಕ್ಷ ವೈ.ಎಚ್.ವಿಜಯಕರ್ ಮತ್ತಿತರರು ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಮುಖಂಡರಾದ ಚನ್ನಪ್ಪ ವಿಜಯಕರ್, ಅಪ್ಪು ದೇಗಿನಾಳ, ಬಿ.ಆರ್.ಚಪ್ಪರಬಂದ, ಬಾಪೂಗೌಡ ಪೀರಾಪೂರ, ಶರಣಬಸ್ಸು ಚಲವಾದಿ, ಅಲ್ತಾಪ್ ಮುಲ್ಲಾ, ಸಂಗು ಮೇಲಿನಮನಿ, ಮನ್ಸು ನಾಯಕ, ರಂಜಾನ ನದಾ, ಸಂಗನಗೌಡ ಪಾಟೀಲ, ರವಿ ಮೇತ್ರಿ, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net