ಬಡವರಿಗೆ ಬಹಳಷ್ಟು ಯೋಜನೆ ತಂದ ಕಾಂಗ್ರೆಸ್

h3-rajat
Published on

ಹುಬ್ಬಳ್ಳಿ: ಮುಂಬರುವ 2024ರ ಲೋಕಸಭಾ ಚುನಾವಣೆ ನಿಮಿತ್ತ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಮಾಜಿ ಶಾಸಕ ದಿ. ಬಸಪ್ಪ ಉಪ್ಪಿನ ಅವರ ನಿವಾಸದ ಸಭಾಂಗಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜರುಗಿತು.
ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಬಡವರಿಗೆ ಬಹಳಷ್ಟು ಯೋಜನೆ ಜಾರಿಗೆ ತಂದಿದೆ. ಸ್ವಾತಂತ್ರೃ ಹೋರಾಟದಿಂದ ಹಿಡಿದು ಇಂದಿನ ತಂತ್ರಜ್ಞಾನ ಯುಗದವರೆಗೆ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಹಾಗಾಗಿ ಪಕ್ಷಕ್ಕಾಗಿ ಎಲ್ಲರೂ ದುಡಿಯೋಣ ಎಂದರು.
ಗ್ರಾಪಂ ಸದಸ್ಯರಾದ ಮಲ್ಲೇಶ ಬೆಳ್ವಾಡಿ, ಬಸಪ್ಪ ನಾಯ್ಕರ, ಇರ್ಷಾದ ಮುಲ್ಲಾ, ಅಲ್ತಾಪ ಮುಲ್ಲಾ, ರಬ್ಬಾನಿ ಗೋಕಾವಿ, ಮುಖಂಡರಾದ ವಿದ್ಯಾಧರ ಸುಂಕದ, ಲೋಕೇಶ ಸರಾವರಿ, ಶರೀಫ ಮುಡ್ಸಿಬನ, ಈರಪ್ಪ ರಾಟಿ, ಹಾಲಾಜ್ಜ ತಡಾಳ, ಶಿವಾನಂದ ಪೂಜಾರ, ಹರೀಶ ಲಕ್ಷ್ಮೇಶ್ವರ, ಲಾಲಸಾಬ್ ಕಣವಿ, ಹನುಮಂತ ಹಿರೇಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net