ಸದನದಲ್ಲಿ ದುರ್ವರ್ತನೆ ತೋರಿದ ಶಾಸಕರ ವಜಾ ಮಾಡಿ

web 3
Published on

ಕಡೂರು: ವಿಧಾನಸಭೆಯಲ್ಲಿ ದುರ್ವರ್ತನೆ ತೋರಿದ ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿರಸ್ತೇದಾರ್​ಗೆ ಮನವಿ ಸಲ್ಲಿಸಿದರು.

ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ವಿಧಾನ ಸೌಧದಂತಹ ಪವಿತ್ರ ಸ್ಥಳದಲ್ಲಿ ವರ್ಗಾವಣೆಯಂಥ ಸಣ್ಣ ವಿಚಾರದಲ್ಲಿ ಸಚಿವ ಮತ್ತು ಕ್ಷೇತ್ರದ ಶಾಸಕರು ಪರಸ್ಪರ ವಾಗ್ವಾದ ನಡೆಸಿರುವುದು ಕ್ಷೇತ್ರಕ್ಕೆ ಮಸಿ ಬಳಿದಂತಾಗಿದೆ ಎಂದು ಆರೋಪಿಸಿದರು.

ಅಧಿವೇಶನದಲ್ಲಿ ಕ್ಷೇತ್ರದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು ಬಿಟ್ಟು ವರ್ಗಾವಣೆಯಂತಹ ವಿಚಾರದಲ್ಲಿ ಸಚಿವರ ಬಳಿ ವಾಗ್ವಾದ ನಡೆಸಿದ ಶಾಸಕರ ವರ್ತನೆ ಖಂಡನೀಯ. ಈ ರೀತಿ ಆಕ್ರಮಣಕಾರಿ ಧೋರಣೆ ಹೊಂದಿದ ಸಚಿವ-ಶಾಸಕರನ್ನು ರಾಜ್ಯಪಾಲರು ಕೂಡಲೇ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net