ಬಿಜೆಪಿಯವರಿಗೆ ಬೂತ್ ಮಟ್ಟದಲ್ಲಿ ಉತ್ತರ : ಮಂಜುನಾಥ ಭಂಡಾರಿ ಕರೆ

New Project (5)
Published on

ಪುತ್ತೂರು ಗ್ರಾಮಾಂತರ: ಬಿಜೆಪಿಯವರು ಭಾವನೆಗಳ ಜತೆ ಆಟವಾಡುತ್ತಿದ್ದಾರೆಯೇ ಹೊರತು ಜನತೆಯ ಬದುಕು ಕಟ್ಟುವ ಕೆಲಸ ಮಾಡಿಲ್ಲ. ಬಿಜೆಪಿಯ ಕುತಂತ್ರಗಳಿಗೆ ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಉತ್ತರ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕೋಡಿಂಬಾಡಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕೋಡಿಂಬಾಡಿ- ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಸೋಮವಾರ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಜವಾಹರ್‌ಲಾಲ್ ಮಂಚ್ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಪಕ್ಷದ ಮುಖಂಡರಾದ ಡಾ.ರಾಜಾರಾಮ್ ಕೆ.ಬಿ., ಸಭಾಶ್ ರೈ ಕೊಳ್ನಾಡು, ಜೋಕಿಂ ಡಿಸೋಜ, ಮರಳೀಧರ್ ರೈ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್, ಮೋನಪ್ಪ ಗೌಡ, ಯೋಗೀಶ್ ಸಾಮಾನಿ, ಮಲ್ಲಿಕಾ ಅಶೋಕ್ ಪೂಜಾರಿ, ಜಯಪ್ರಕಾಶ್ ಬದಿನಾರು, ಯು.ಟಿ.ತೌಸೀಫ್, ನಜೀರ್ ಮಠ, ನಿರಂಜನ ರೈ ಮಠಂತಬೆಟ್ಟು, ಪ್ರಭಾಕರ ಸಾಮಾನಿ, ಯತೀಶ್ ಶೆಟ್ಟಿ, ಪದ್ಮನಾಭ ಶೆಟ್ಟಿ,ಪದ್ಮನಾಭ ಪಕ್ಕಳ, ಜಗನ್ನಾಥ ಶೆಟ್ಟಿ ಮತ್ತಿತರರು ಇದ್ದರು.

ನಮಗೆ ಇನ್ನೂ 3 ವರ್ಷ ಅಧಿಕಾರ ಚಲಾಯಿಸಲು, ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡಿ. ಸುಳ್ಳುಗಳ ಸುರಿಮಳೆಯ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಬಡವರ ಕಣ್ಣೀರೊರೆಸುವ ಜತೆಗೆ ಪುತ್ತೂರು ಕ್ಷೇತ್ರದಲ್ಲಿ ಇತಿಹಾಸ ಪುಟಗಳಲ್ಲಿ ದಾಖಲಾಗುವ ಕೆಲಸಗಳನ್ನು ನಾವು ಮಾಡಿ ತೋರಿಸುತ್ತೇವೆ. ಅಶೋಕ್‌ಕಮಾರ್ ರೈ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net