ಮಾನವೀಯ ಮೌಲ್ಯಗಳನ್ನು ಮರೆಯದಿರಿ

background (2)
Published on

ಮುದಗಲ್: ಜನಸಾಮಾನ್ಯರು ಆಧುನಿಕತೆಗೆ ತಕ್ಕಂತೆ ಬದಲಾವಣೆ ಬಯಸುವುದು ತಪ್ಪಲ್ಲ. ಆದರೆ, ಮಾನವೀಯ ಮೌಲ್ಯಗಳನ್ನು ಮರೆಯದಿರಿ ಎಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪೂರ ಸಲಹೆ ನೀಡಿದರು.

ಮುದಗಲ್‌ನ ಅನ್ನದಾನಗೌಡ ಪಾಟೀಲ್ ಪದವಿ ಕಾಲೇಜಿನಲ್ಲಿ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಶನಿವಾರ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಪಾಲಕರು, ಶಿಕ್ಷಕರು ಇಂಗ್ಲಿಷ್ ಜತೆಗೆ ಕನ್ನಡ ಕಲಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿ ನಾಡು-ನುಡಿ ಮತ್ತು ಕನ್ನಡ ಶಾಲೆ ಉಳಿಸಲು ಶ್ರಮಿಸಬೇಕು. ಸಂಸ್ಕೃತಿ-ಸಂಸ್ಕಾರ, ಮಾನವೀಯ ಗುಣಗಳ ಬಗ್ಗೆ ತಿಳಿ ಹೇಳಬೇಕು ಎಂದ ಅವರು, ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಪ್ರದರ್ಶನಗೊಳ್ಳುತ್ತಿರುವ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ ಎಂದರು.

ಶಿಕ್ಷಕರಾದ ಅನಿಲ್ ಕುಮಾರ್ ಬುಶೆಟ್ಟಿ, ಸಂಗಮೇಶ, ಜಾನಪದ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಅಶೋಕಗೌಡ ಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ್, ಕಸಾಪ ಘಟಕ ಅಧ್ಯಕ್ಷ ಹಾಜಿಮಲಂಗಬಾಬಾ, ಶಿವಸಂಚಾರ ತಂಡದ ಸಂಚಾಲಕ ಜೀವನ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net