ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1
ಗಳತಗಾ ಗ್ರಾಮದ 25ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ನಿಪ್ಪಾಣಿ ಬಿಜೆಪಿ ಕಚೇರಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಶ್ರೀಕಾಂತ ಬನ್ನೆ, ಆಲಗೌಡ ಪಾಟೀಲ, ಮಿಥುನ ಪಾಟೀಲ, ಬಾಬಾಸಾಬ ಜಾಧವ ಇತರರಿದ್ದರು.
Published on

ಚಿಕ್ಕೋಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆ ಹಾಗೂ ಚಿಕ್ಕೋಡಿ ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಗಳತಗಾ ಗ್ರಾಮದ 25ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅವರನ್ನು ಬರಮಾಡಿಕೊಂಡು ಮಾತನಾಡಿದರು.

ಗಳತಗಾ ಗ್ರಾಮದ ಅಮರ ತೇಳ್ವೆಕರ, ಓಂಕಾರ ಸಪಕಾಳೆ, ಓಂಕಾರ ಧೆರೆ, ಪ್ರಶಾಂತ ಸಪಕಾಳೆ, ಗಣೇಶ ಸಪಕಾಳೆ, ದರ್ಶನ ಹೀರವೆ, ಸ್ವಪ್ನಿಲ ಪರೀಟ, ಋಷಿ ಪಾಟೀಲ, ಆದಿತ್ಯ ಮುಕರೆ, ಓಂಕಾರ ಘಾಟಗೆ, ವಿನಾಯಕ ಪವಾರ, ಅವಧೂತ್ ಪರೀಟ, ಓಂಕಾರ ಜಾಧವ, ಜಯಕುಮಾರ ಉಪಲಾನೆ, ವೈಭವ ಪರೀಟ, ಅಭಿಷೇಕ ಮಾಯೇಕರ, ಓಂಕಾರ ಉಪಲಾನೆ, ವಿನಾಯಕ ಕೊಂಡೇಕರ, ಯಶ ಘೋಟಣೆ, ಅವಿನಾಶ ಪರೀಟ, ಕಾರ್ತಿಕ ಪರೀಟ ಅವರು ಕಾಂಗ್ರೆಸ್ ಪಕ್ಷ ತೊರೆದು ನಿಪ್ಪಾಣಿ ಬಿಜೆಪಿ ಕಚೇರಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಶ್ರೀಕಾಂತ ಬನ್ನೆ, ಆಲಗೌಡ ಪಾಟೀಲ, ಮಿಥುನ ಪಾಟೀಲ, ಬಾಬಾಸಾಬ ಜಾಧವ, ಶಿವು ಖೋತ, ರಾಹುಲ ವಾಕಪಾಟೆ, ಸಂಜಯ ಖೋತ, ವಿನಾಯಕ ಸಾಸನೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net