ಟಿಕೆಟ್ ಹಂಚಿಕೆ ಮುನ್ನವೇ ಬೆಳಗಾವಿ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಾಮಾಧಾನ

Screenshot_20230316_123009.jpg
Published on

ಬೆಳಗಾವಿ : ರಾಜ್ಯದಲ್ಲಿ‌ ಈ ಬಾರಿ ಶತಾಯಗತಾಯ ಸರ್ಕಾರ ರಚಿಸಲೇ ಬೇಕು ಎಂಬಂತೆ ಕಾಂಗ್ರೆಸ್ ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಆದರೆ, ವಿಧಾನ ಸಭೆ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಮೊದಲ‌ ಪಟ್ಟಿ ಬಿಡುಗಡೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಅಸಾಮಾಧಾನ ಭುಗಿಲೆದ್ದಿದೆ.

ರಾಜ್ಯದ ಜನತೆಯ ಭರವಸೆ ಗಿಟ್ಟಿಸಿಕೊಳ್ಳುವಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡುವುದರ ಮೂಲಕ‌ವೂ ಪ್ರಯತ್ನಿಸುತ್ತಿದ್ದು, ಕಾರ್ಯಕರ್ತರನ್ನು ಹುರಿದುಂಬಿಸುವುದಕ್ಕಾಗಿ ಎಐಸಿಸಿಯ ರಾಹುಲ್ ಗಾಂಧಿ ಅವರು ಮಾ.20ಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ಯದ ರೂಪರೇಷೆ ಹಾಗೂ ಸಮಾವೇಶಕ್ಕೆ ಜನರನ್ನು ಸೇರಿಸುವುದು ಮತ್ತು ಕಿತ್ತೂರು ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಕರೆಯಲಾಗಿದ್ದ ಬೆಳಗಾವಿ ನಗರದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಸಭೆ ಆರಂಭಕ್ಕೂ ಮೊದಲು ಈಗಾಗಲೇ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಗೆಲುವು ಸಾಧಿಸಬಲ್ಲ
ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿ ತಮ್ಮ ಮುಖಂಡರ ಹೆಸರು ಕೈ ಬಿಡಲಾಗಿದೆ ಎಂದು ಕಾರ್ಯಕರ್ತರು ಗಲಾಟೆ ಮಾಡಿದರು.

ಉದ್ದೇಶ ಪೂರ್ವಕವಾಗಿಯೇ ನಮ್ಮ ನಾಯಕರ ಹೆಸರು ಕೈ ಬಿಡಲಾಗಿದೆ ಎಂದು ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ನಮ್ಮನ್ನು ಒಳಗೆ ಹೋಗಲು ಬಿಡಿ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ರಮೇಶ್ ಕುಡಚಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ಒಳ ಬಿಡದ ಕಾರಣ ಮಾಜಿ ಶಾಸಕ ರಮೇಶ ಕುಡಚಿ ಅರ್ಜಿ ತೆಗೆದು ಹಾಕಿದ್ದಕ್ಕೆ ಬೆಂಬಲಿಗರ ಗಲಾಟೆ ನಡೆಸಿದರಲ್ಲದೇ, ಬಾಬು ಬಾಗವಾನ್ ಎಂಬುವವರು ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ಹೊರಹಾಕಿದರು.ಇದರಿಂದಾಗಿ ಕಾಂಗ್ರೆಸ್ ಭವನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net