ಕಾಂಗ್ರೆಸ್ ಆಕ್ಷೇಪದ ಹಿನ್ನಲೆ ಬಿಜೆಪಿ ಪ್ರಚಾರ ಬಿತ್ತಿ ಪತ್ರ ತೆರವು

5adarshkdga5
Published on

ಮಡಿಕೇರಿ: ಸರ್ಕಾರಿ ಕಛೇರಿಯ ಆವರಣದಲ್ಲಿ ಬಿಜೆಪಿಯ ಸದಸ್ಯತ್ವ ಪ್ರಚಾರದ ಬಿತ್ತಿ ಪತ್ರ ಅಂಟಿಸಿದ್ದು ಕಾಂಗ್ರೆಸ್ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಪರಿಣಾಮ ಭಿತ್ತಿ ಪತ್ರ ತೆರವು ಕಾರ್ಯ ನಡೆಯಿತು.


ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಛೇರಿಯ ಗೋಡೆಯಲ್ಲಿ ಶುಕ್ರವಾರದಂದು ಬಿಜೆಪಿ ಪಕ್ಷದ ಸದಸ್ಯತ್ವ ನೋಂದಣಿಯ ಪ್ರಚಾರದ ಸಲುವಾಗಿ ಭಿತ್ತಿ ಪತ್ರಗಳನ್ನು ತಡರಾತ್ರಿಯಲ್ಲಿ ಅಂಟಿಸಲಾಗಿತ್ತು. ಇದನ್ನು ಗಮನಿಸಿದ ಕೊಡಗು ಕಾಂಗ್ರೆಸ್ ತಂಡ ಶನಿವಾರ ತೋಟಗಾರಿಕೆ ಕಛೇರಿಗೆ ದೌಡಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಎಚ್ಚೆತ್ತ ಇಲಾಖಾ ಅಧಿಕಾರಿಗಳು ತಮ್ಮ ಸಿಬ್ಬಂದಿ ಯವರಿಂದ ಭಿತ್ತಿ ಪತ್ರ ತೆರವುಗೊಳಿಸಿದರು.


ಈ ಸಂದರ್ಭ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನರವರು, ಬಿಜೆಪಿಯವರು ಸರ್ಕಾರಿ ಕಛೇರಿಗಳನ್ನು ಗುತ್ತಿಗೆ ಪಡೆದ ರೀತಿ ವರ್ತಿಸುತ್ತಿದ್ದಾರೆ ಎಂು ಆರೋಪಿಸಿದರು.


ಈ ಸಂದರ್ಭದಲ್ಲಿ ಡಿಸಿಸಿ ಸದಸ್ಯರಾದ ಕಟ್ರತನ ವೆಂಕಟೇಶ್, ಅಯಿಲಪಂಡ ಪುಷ್ಪ ಪೂಣಚ್ಚ, ಪ್ರಕಾಶ್ ಆಚಾರ್ಯ, ಎಸ್.ಸಿ.ಘಟಕದ ಬ್ಲಾಕ್ ಅಧ್ಯಕ್ಷ ಮುದ್ದುರಾಜ್, ಅಲ್ಪ ಸಂಖ್ಯಾತ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net