

ಕೊಕ್ಕರ್ಣೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 80 ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದು ಸಾಧನೆ ಮಾಡಿದ ನಾಲ್ಕೂರು ಸರ್ಕಾರಿ ಪೌಢಶಾಲೆ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಸಾದ್ ಹೆಗ್ಡೆ ವಾರಾಳಿ, ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಶಶಿಧರ್ ಶೆಟ್ಟಿಗಾರ್, ಅಶೋಕ್ ಭಟ್ ಬಾಳೆಗುಂಡಿ, ಸಿ.ಎ.ಅವಿನಾಶ್ ರಾವ್, ನಿವೃತ್ತ ಮುಖ್ಯಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಕೋಟಿ ಹಾಂಡ, ಎಂ.ಕೆ.ನಾಯ್ಕ ಮಿಯಾರು, ರಾವೇಂದ್ರ ಕುಲಾಲ್, ಸಹಪರಿವಾರ ಜಂಗಮೇಶ್ವರ ದೇವಸ್ಥಾನದ ಅರ್ಚಕ ಶಶಾಂಕ್ ಭಟ್, ನಾಗೇಂದ್ರ ಆಚಾರ್ ವಾರಾಳಿ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ವಾಜಿ ಅಧ್ಯಕ್ಷೆ ಕಮಲಾ ಬಾಯಿ, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂ ಪದಾಧಿಕಾರಿಗಳು, ಶಿಕ್ಷಕರು, ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ನಾಯ್ಕ ಸ್ವಾಗತಿಸಿ, ಶಿಕ್ಷಕಿ ಜಯಾ ವಂದಿಸಿದರು. ಶಿಕ್ಷಕ ಲಕ್ಷ್ಮಣ ನಾಯ್ಕ ನಿರೂಪಿಸಿದರು.