

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಗೆ ಪ್ರಥಮ ಬಾರಿಗೆ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಕಾಯಕಲ್ಪ ನೋಡಲ್ ಅಧಿಕಾರಿ ಡಾ.ಡಿಆ.ರ್.ಪುರುಷೋತ್ತಮ್ ಮಾತನಾಡಿ, ಕಾಯಕಲ್ಪ ಕಾರ್ಯಕ್ರಮ ರಾಜ್ಯಮಟ್ಟದ ಎಲ್ಲಾ ಆಸ್ಪತ್ರೆಯ ಉತ್ತಮಸೇವೆ, ರೋಗಿಗಳ ಸುರಕ್ಷತೆ, ಸೋಂಕುನಿಯಂತ್ರಣ, ಆಸ್ಪತ್ರೆಯ ಸ್ವಚ್ಛತೆ, ನೈರ್ಮಲ್ಯ ಸುಧಾರಣೆ ಈ ಎಲ್ಲಾ ಮುಖ್ಯಉದ್ದೇಶಗಳನ್ನು ಈಡೇರಿಸಲು ೨೦೧೫ ರಿಂದಪ್ರಾರಂಭಗೊಂಡಿರುತ್ತದೆ. ಕಾರ್ಯಕ್ರಮದ ಅಡಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿನ ಅಧಿಕಾರಿ ಸಿಬ್ಬಂದಿವರ್ಗದವರೆಲ್ಲರೂ, ಸತತವಾಗಿ ಶ್ರಮಿಸಿ ೨೦೨೨-೨೩ನೇ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಮೌಲ್ಯಮಾಪನದಲ್ಲಿಪ್ರಶಂಶನ ಪ್ರಶಸ್ತಿಗೆ ಅರ್ಹತೆ ಪಡೆದು ೩ಲಕ್ಷ ನಗದು ಪುರಸ್ಕಾರಕ್ಕೆ ಪಾತ್ರರಾಗಿರುತ್ತಾರೆ. ರೋಗಿಗಳ ಸೇವೆ ಮತ್ತು ಆಸ್ಪತ್ರೆಯ ಉಚಿತ ಸೌಲಭ್ಯಗಳನ್ನು ಸರ್ಕಾರದ ಮಾನದಂಡದಂತೆ ಮತ್ತಷ್ಟು ಪ್ರೇರಣೆಗೊಂಡು, ಪ್ರತಿ ವರ್ಷವೂ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಹತೆ ಪಡೆಯಲು ನಾವೆಲ್ಲರೂ ಬದ್ಧರಾಗಬೇಕು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಮಾತನಾಡಿ, ಮುಂದಿನ ದಿನಗಳಲ್ಲಿನಮ್ಮ ಸಂಸ್ಥೆಯು ಇನ್ನೂ ಹೆಚ್ಚಿನ ಗುಣಮಟ್ಟ ಖಾತ್ರಿ ಸೇವೆಗಳನ್ನು ನೀಡುವಂತಾಗಬೇಕು. ಜತೆಗೆ ರಾಜ್ಯದಲ್ಲೇ ಪ್ರಥಮ ಬಹುಮಾನ ಪಡೆಯುವ ನಿಟ್ಟಿನಲ್ಲಿಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಮಾತನಾಡಿ, ಆಸ್ಪತ್ರೆ ಗುಣಮಟ್ಟ ಕಾಪಾಡುವಲ್ಲಿತಮ್ಮ ಸಹಕಾರ ಹಾಗೂ ಮಾರ್ಗದರ್ಶನ ನಿರಂತರವಾಗಿ ಇರುತ್ತದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಎಚ್.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಂಜುಂಡಯ್ಯ, ಜಿಲ್ಲಾ ಗುಣಮಟ್ಟ ಖಾತ್ರಿ ಘಟಕದ ನೋಡಲ್ ಅಧಿಕಾರಿ ಎನ್.ಆನಂದ್, ಶುಶ್ರೂಷಕ ಅಧೀಕ್ಷಕಿ ವಿ.ಎಂ.ವೀಣಾ, ಸ್ಥಾನೀಯ ವೈದ್ಯಾಧಿಕಾರಿ ಡಾ.ವಿ.ಎಸ್.ಸತೀಶ್,ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಕೆ.ಎಂ.ರೋಹಿಣಿ ಸೇರಿದಂತೆ ಬೋಧಕ ಸಿಬ್ಬಂದಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಯ ಜಿಲ್ಲಾ ಗುಣಮಟ್ಟ ಖಾತ್ರಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಶ್ರಮಿಸಿದ ಆಸ್ಪತ್ರೆಯ ಐವತ್ತೈದು ಸಿಬ್ಬಂದಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.