ಎಚ್.ಡಿ.ದೇವೇಗೌಡರಿಗೆ ಅಭಿನಂದನೆ ಕಾರ್ಯಕ್ರಮ ನಾಳೆ

ಬುಡ್ಡನಗೌಡ
ಬುಡ್ಡನಗೌಡ
Published on

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ರೂವಾರಿ, ಅನ್ನದಾತರ ಕಣ್ಮಣಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಜೂ.27 ರಂದು ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡಿ ಟಿಎಪಿಸಿಎಂಎಸ್ ಮೈದಾನದಲ್ಲಿ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಇದಕ್ಕು ಮುನ್ನ ಚಿಕ್ಕಹೊನ್ನಕುಣಿಯಲ್ಲಿ ರೈತ ಮಲ್ಲಣ್ಣ ಸಾಹುಕಾರ ನಿರ್ಮಿಸಿದ ದೇವೇಗೌಡ ಅವರ ಪುತ್ಥಳಿಯನ್ನು ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ. ನಂತರ ‘ಜನತಾದಳದ ನಡೆ ಜನರ ಕಡೆ’ ಕಾರ್ಯಕ್ರಮ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ತಾಲೂಕಿನ ರೈತರು, ಯುವಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಪ್ರಮುಖರಾದ ಶಿವರಾಜ ನಾಯಕ ಕೊತ್ತದೊಡ್ಡಿ, ಮಲ್ಲು ನಿಂಬೇಕಾಯಿ, ಭೀಮಣ್ಣ ಗುಮೇದಾರ್, ಸಂಗನಗೌಡ ಕೋಣಚಪ್ಪಳಿ, ಶಿವರಾಜ ಕೋಡೇರ್, ರಮೇಶ, ರಾಮನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net