ವಿಜಯರತ್ನ ಪ್ರಶಸ್ತಿ ಎಕ್ಸೆಲ್ ಕುಟುಂಬಕ್ಕೆ ಸಮರ್ಪಿತ : ಸುಮಂತ್ ಕುಮಾರ್ ಜೈನ್ ಅನಿಸಿಕೆ

06
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರಾಜ್ಯದ ನಂ.1 ಪತ್ರಿಕೆ ವಿಜಯವಾಣಿ ನೀಡಿರುವ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಇಡೀ ನಮ್ಮ ಎಕ್ಸೆಲ್ ಕುಟುಂಬಕ್ಕೆ ಸಮರ್ಪಿತವಾಗಿದೆ. ಪುರಸ್ಕಾರ ಬಂದಾಗ ಹಿಗ್ಗದೆ, ತಿರಸ್ಕಾರ ಆದಾಗ ಜಗ್ಗದೆ ಇರುವುದೇ ನಿಜವಾದ ನಾಯಕತ್ವ. ಅಂತಹ ವ್ಯಕ್ತಿತ್ವ ತಂದೆ, ತಾಯಿ, ಗುರು ವೃಂದ ನನಗೆ ಅನುಗ್ರಹಿಸಿದೆ ಎಂದು ಸುಮಂತ್ ಕುಮಾರ್ ಜೈನ್ ಹೇಳಿದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್, ಅರಮಲೆಬೆಟ್ಟ ಕ್ಯಾಂಪಸ್‌ಗಳ ಬೋಧಕ ವೃಂದ, ಆಡಳಿತ ಕಚೇರಿ ಉದ್ಯೋಗಿಗಳ ವತಿಯಿಂದ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ವಿಜಯರತ್ನ ಪ್ರಶಸ್ತಿ ಪಡೆದ ಪ್ರಯುಕ್ತ ಪಂಚಲೋಹದ ಬೃಹತ್ ಸರಸ್ವತಿ ವಿಗ್ರಹ, ಕೆಂದಾಳಿ ಎಳನೀರು ಗೊನೆ, ಕದಳಿ ಬಾಳೆ ಗೊನೆ ಸಮರ್ಪಿಸಲಾಯಿತು.

ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ, ಅರಮಲೆ ಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಮಾತನಾಡಿದರು. ಸುಮಂತ್ ಕುಮಾರ್ ಜೈನ್ ಅವರ ತಂದೆ ಸತೀಶ್ ಕುಮಾರ್ ಆರಿಗ, ತಾಯಿ ಶುಭಲತಾ, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ರಸಾಯನ ವಿಜ್ಞಾನ ವಿಭಾಗ ಮುಖ್ಯಸ್ಥ ಈಶ್ವರ್ ಶರ್ಮ, ಗಣಿತ ವಿಜ್ಞಾನ ವಿಭಾಗದ ಪ್ರಸಾದಿ ಚೇತನ್, ಪ್ರವೀಣ್ ಪಾಟೀಲ್, ಜೀವ ವಿಜ್ಞಾನ ವಿಭಾಗದ ದೀಪಾ, ಗಣಕ ವಿಜ್ಞಾನ ವಿಭಾಗದ ಪ್ರಭಾಕರ್, ಕನ್ನಡ ವಿಭಾಗ ಮುಖ್ಯಸ್ಥ ಜಯರಾಮ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ., ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜ, ಆಡಳಿತ ಮಂಡಳಿ ಸಹನಾ ಜೈನ್, ಪದ್ಮ ಪ್ರಸಾದ್ ಉಪಸ್ಥಿತರಿದ್ದರು. ಭೌತ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸತ್ಯನಾರಾಯಣ ಭಟ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ವಂದಿಸಿದರು. ಕನ್ನಡ ವಿಭಾಗದ ಮೊಹಮ್ಮದ್ ಮುನೀರ್ ಕಾರ್ಯಕ್ರಮ ನಿರೂಪಿಸಿದರು.

ಪುಟ್ಟ ಸಂಸ್ಥೆಯಾಗಿದ್ದ ನಮ್ಮ ಕಾಲೇಜು, ಇಂದು ಬೃಹತ್ ಆಗಿ ಬೆಳೆದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ನಮ್ಮ ಅಧ್ಯಕ್ಷರು. ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಮಾನ, ಪ್ರಶಸ್ತಿ-ಪುರಸ್ಕಾರ ಒಲಿದು ಬರಲಿ. ಡಾ.ನವೀನ್ ಕುಮಾರ್ ಮರಿಕೆ ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ಪ್ರಾಂಶುಪಾಲ https://www.vijayavani.net/express-bus https://www.vijayavani.net/?p=2818028&preview=true

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net