

ಹಳೆಯಂಗಡಿ: ಕಾರ್ಯಕರ್ತರ ಒಗ್ಗಟ್ಟಿನ ಪರಿಣಾಮದಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಮುಂದಿನ ದಿನದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಜಿ.ಪಂ., ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗೋಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಹಳೆಯಂಗಡಿ ಪಂಚಾಯಿತಿ ಎರಡನೇ ವಾರ್ಡಿನ ಉಪಚುನಾವಣೆಯಲ್ಲಿ ಜಯಭೇರಿ ಗಳಿಸಿದ ಸುಚಿತ್ರಾ ಪ್ರಸನ್ನ ಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಪಿಸಿಸಿ ಸದಸ್ಯ ಎಚ್.ವಸಂತ್ ಬರ್ನಾಡ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮದ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪದ್ಮಾವತಿ ಶೆಟ್ಟಿ, ನಾಯಕ ಶಶಿಂದ್ರ ಎಂ.ಸಾಲ್ಯಾನ್, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜಿಜ್, ನಿರಂಜಲ ನೀತು, ಶಶಿಕಲಾ, ಅನಿಲ್ ಪೂಜಾರಿ, ಚಂದ್ರಕುಮಾರ್, ಮಾಜಿ ಅಧ್ಯಕ್ಷೆ ಜಲಜಾ, ನಾಯಕರಾದ ಧರ್ಮಾನಂದ ಶೆಟ್ಟಿಗಾರ್, ಸಂತೋಷ್ ಕೊಪ್ಪಳ, ಪ್ರಸನ್ನ ಕುಮಾರ್, ಉತ್ತಮ್ ಕುಮಾರ್, ರಜಿಯಾ ಬಾನು ಮೊದಲಾದವರಿದ್ದರು.