ಪ್ರಧಾನಿ ಮೋದಿ, ಇಸ್ರೋ ಅಧ್ಯಕ್ಷ ಸೋಮನಾಥಗೆ ಅಭಿನಂದನಾ ಪತ್ರ

24 svr 05- ABINANDANE
Published on

ಸವಣೂರ: ಚಂದ್ರಯಾನ- 3 ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ವಿಜಯೋತ್ಸವ ಪ್ರಭಾತಪೇರಿ ಕೈಗೊಂಡು, ಉಪ ವಿಭಾಗಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಅವರಿಗೆ ಅಭಿನಂದನಾ ಪತ್ರ ಸಲ್ಲಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ವಿಜಯೋತ್ಸವ ಪ್ರಭಾತಪೇರಿ ಕೈಗೊಂಡು ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಜಮಾವಣೆಗೊಂಡು, ಸಿಹಿ ಹಂಚಿದರು.

ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಡಿ.ಎನ್. ಗುಂಜಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಸಹಕಾರದಿಂದ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಅತ್ಯಂತ ಹೆಮ್ಮೆಯ ಕಾರ್ಯ ಮಾಡಿರುವುದು ರಾಷ್ಟ್ರವನ್ನು ವಿಶ್ವದ ಜನತೆ ಗಮನಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ವಿ.ಎಸ್. ಸಿಂಧೂರ, ಸಿ.ಸಿ. ಅಂಗಡಿ, ನಂದಿಕೇಶ್ವರ ಹಾವಣಗಿ, ಎ.ಎ. ಜಹಾಂಗೀರ, ಸಿಆರ್​ಪಿ ನಾಗರಾಜ ಬಂಡಿವಡ್ಡರ, ಪ್ರಾಚಾರ್ಯ ಆನಂದ ಬೆಲ್ಲದ, ಮುಖ್ಯಗುರುಗಳಾದ ಬಿ.ಬಿ. ದ್ಯಾಮನಗೌಡ್ರ, ಪಿ.ವಿ. ಅರಗೋಳ, ಎ.ಎಂ. ಕಲಕೋಟಿ, ಐ.ಎಸ್. ಬರದೂರ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net