ಜಿಲ್ಲೆಯಲ್ಲಿ ಉತ್ತಮ ಗಣತಿ: ಏಳು ಸಮೀಕ್ಷೆದಾರರಿಗೆ ಅಭಿನಂದನಾ ಪತ್ರ

Dc-Dr.Kumara
Published on

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ ಸಮೀಕ್ಷೆದಾರರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅಭಿನಂದನಾ ಪತ್ರ ನೀಡಿದ್ದಾರೆ.

ಸೆ.22ರಿಂದ ಪ್ರಾರಂಭವಾದ ಗಣತಿಗೆ ಸಂಬಂಧಿಸಿದಂತೆ ಸಮೀಕ್ಷೆದಾರರಿಗೆ ಗುರಿ ನಿಗದಿಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಶೇ.100ರಷ್ಟು ಸಾಧನೆ ಮಾಡಿರುವ ಪಾಂಡವಪುರ ತಾಲೂಕಿನ ಕೆ.ಸುಮಂಗಲಾ, ಮಹಮ್ಮದ್ ರಶೂಲ್ ನೈಮೋಡಿ, ನಾಗಮಂಗಲ ತಾಲೂಕಿನ ಎಂ.ಎನ್.ಹಾಲೇಶ್, ಎಸ್.ರವಿ, ಕೆ.ಆರ್.ಪೇಟೆ ತಾಲೂಕು ಎಸ್.ರಾಜು, ಕೆ.ಟಿ.ರವಿ, ಮಳವಳ್ಳಿ ತಾಲೂಕಿನಲ್ಲಿ ಕೆ.ಮಹದೇವ, ಮದ್ದೂರಿನಲ್ಲಿ ಟಿ.ಎಸ್.ನರಸಿಂಹರಾಜು ಹಾಗೂ ಮಂಡ್ಯ ತಾಲೂಕಿನಲ್ಲಿ ರೋಸ್ ಮೇರಿ ಅವರನ್ನು ಅಭಿನಂದಿಸಲಾಗಿದೆ. ಉಳಿದ ಗಣತಿದಾರರು ಇದೇ ರೀತಿ ಉತ್ತಮ ಸಾಧನೆ ಮಾಡಿ ನಿಗದಿಪಡಿಸಿರುವ ದಿನಾಂಕದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net