ಅಭಿನಂದನ ಕಾರ್ಯ ಅಭಿನಂದನೀಯ

web2
ಆರ್.ಎ.ಪಾಟೀಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಭಿನಂದನ ಪಾಟೀಲ ಅವರ ಜನ್ಮದಿನ ನಿಮಿತ್ತ ಸಸಿ ನೆಡಲಾಯಿತು. ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ, ಸುಭಾಷ ಶೆಟ್ಟಿ, ಭುಜಗೌಡ ಪಾಟೀಲ ಇತರರಿದ್ದರು.
Published on

ಬೋರಗಾಂವ: ಸಹಕಾರ, ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಕ್ರೀಡೆ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಭಿನಂದನ ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದು ಶ್ರೀಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಿಇಒ ಅಶೋಕ ಬಂಕಾಪುರೆ ಹೇಳಿದರು.

ಪಟ್ಟಣದಲ್ಲಿ ಶ್ರೀಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿ ಮತ್ತು ಪಿಕೆಪಿಎಸ್ ಸಂಘದಿಂದ ಅರಿಹಂತ ಸಂಸ್ಥೆಯ ಚೇರ್ಮನ್ ಅಭಿನಂದನ ಪಾಟೀಲ ಅವರ 49ನೇ ಜನ್ಮದಿನದ ನಿಮಿತ್ತ ಮಂಗಳವಾರ ಆರ್.ಎ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಸಸಿ ನೆಟ್ಟು ಮಾತನಾಡಿ, ಬಡವರ ಕಂಡರೆ ಮರಗುವ ಅಭಿನಂದನ ಅವರು ಹಿಂದುಳಿದವರಿಗೆ ಸಹಾಯ, ರೈತರಿಗೆ ಹಾಗೂ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.

ಪಿಕೆಪಿಎಸ್ ಸಂಘದ ಸಿಇಒ ಆರ್.ಟಿ.ಚೌಗುಲಾ ಮಾತನಾಡಿದರು. ಜನ್ಮದಿನ ನಿಮಿತ್ತ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ, ಘೋಸರವಾಡದ ಜಾನಕಿ ವೃದ್ಧಾಶ್ರಮದಲ್ಲಿ ದಿನಸಿ ಕಿಟ್ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅರಿಹಂತ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಅರಿಹಂತ ಸಂಸ್ಥೆ ನಿರ್ದೇಶಕ ಸುಭಾಷ ಶೆಟ್ಟಿ, ಭುಜಗೌಡ ಪಾಟೀಲ, ಜೈಪಾಲ ನಾಗಾವೆ, ಶಿವಾನಂದ ರಾಜಮಾನೆ, ರಾಜು ಮಗದುಮ್ಮ, ಜಂಬು ಮಾಳವಾಡೆ, ಸಂದೀಪ ಪಾಟೀಲ, ಶ್ರೀಕಾಂತ ವಾಸವಾಡೆ, ಬಾಬಾಸಾಹೇಬ ಅ್ರಾಜ್, ಅಣ್ಣಾಸಾಹೇಬ ಭೋಜಕರ, ಅರಿಹಂತ ಹಾಲು ಸಂಘದ ಅಧ್ಯಕ್ಷ ಶಿವಾಜಿ ತೋಡಕರ, ಅಜಿತ್ ಸವಾಡೆ, ಶೀತಲ ಹಾವಲೆ, ಪಿಕೆಪಿಎಸ್ ಸಂಘದ ನಿರ್ದೇಶಕ ದರ್ಶನ ಪಾಟೀಲ, ರಾಜೇಂದ್ರ ಐದಮಾಳೆ, ಸುರೇಶ ಬಂಕಾಪುರೆ, ತೈಮೂರ ಮುಜಾವರ, ಬಾಳಾಸಾಹೇಬ ಹಾವಲೆ, ಬಾಹುಬಲಿ ಕವಟೆ, ಸಂಜಯ ಕೋಳಿ, ಶಮಿಕ್ ಶಾ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net