ಜು.15ರಂದು ಒಡನಾಡಿ ದ್ಯಾವಪ್ಪ-50: ಅಭಿನಂದನಾ ಸಮಿತಿ ಅಧ್ಯಕ್ಷ ಸಿ.ತ್ಯಾಗರಾಜು ಮಾಹಿತಿ

1 (3)
Published on

ಮಂಡ್ಯ: ಸಾಮಾಜಿಕ ಹೋರಾಟಗಾರ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಿ.ಎಂ.ದ್ಯಾವಪ್ಪ ಅವರಿಗೆ ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ಜು.15ರಂದು ‘ಒಡನಾಡಿ ದ್ಯಾವಪ್ಪ-50’ ಆಪ್ತಮಾತು-ಅಭಿನಂದನೆ ಸಮಾರಂಭ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷರೂ ಆದ ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ತಿಳಿಸಿದರು.

ಅನ್ಯಾಯದ ವಿರುದ್ಧ ಹೋರಾಡುತ್ತಾ ಸಾಮಾಜಿಕ ಹಾಗೂ ರಾಜಕೀಯವಾಗಿ ಬೆಳೆದಿರುವ ದ್ಯಾವಪ್ಪ ಜನಪರವಾಗಿ ಮಿಡಿಯಬಲ್ಲ ವ್ಯಕ್ತಿತ್ವ ಹೊಂದಿದ್ದಾರೆ. ರೈತ ಕುಟುಂಬದಿಂದ ಬಂದ ಅವರು ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕಾವೇರಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವು ಬಾರಿ ಜೈಲುವಾಸ ಅನುಭವಿಸಿರುವ ಅವರಿಗೆ ಐವತ್ತು ವರ್ಷವಾದರೂ ಹೋರಾಟದಲ್ಲಿ ಮುಂದುವರೆಯುತ್ತಲೇ ಇದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 10ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನ ಮುನ್ಷಿ ಪ್ರೇಮ್‌ಚಂದ್ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಸಿ.ಎಂ.ದ್ಯಾವಪ್ಪ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ. ದ್ಯಾವಪ್ಪ ಕುರಿತು ಪ್ರಗತಿಪರ ಚಿಂತಕ ಗುರುಪ್ರಸಾದ್ ಕೆರಗೋಡು, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಸಾಹಿತಿ ಕೆ.ಪಿ.ಮೃತ್ಯುಂಜಯ ಹಾಗೂ ಸಾವಯವ ಕೃಷಿ ಕೆ.ಜೆ.ಅನಂತರಾವ್ ಮಾತನಾಡಲಿದ್ದಾರೆಂದು ವಿವರಿಸಿದರು.

ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡ ಮಹದೇವ್, ಬಿ.ಎಸ್.ಅನುಪಮಾ, ಯೋಗೇಶ್ ಮಂಗಲ, ಕೋ.ಪು.ಗುಣಶೇಖರ, ಜಾನಪದ ಗಾಯಕರಾದ ಗೊರವಾಲೆ ಚಂದ್ರಶೇಖರ್, ಬಸವರಾಜು ಸಂತೆಕಸಲಗೆರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net