

ಮಂಡ್ಯ: ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವವರಗೆ ಎಲ್‌ಐಸಿ ಉತ್ತಮ ಮಾರ್ಗ ಎಂದು ಭಾರತೀಯ ಜೀವ ವಿಮಾ ನಿಗಮ ಮೈಸೂರು ವಿಭಾಗೀಯ ಕಚೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ನಾಗೇಶ್ವರರಾವ್ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು-ಮೈಸೂರು ಮುಖ್ಯರಸ್ತೆಯ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಎಲ್‌ಐಸಿ ನಿವೃತ್ತ ಅಧಿಕಾರಿ ಡಾ.ಶ್ರೀನಿವಾಸಶೆಟ್ಟಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್‌ಐಸಿಯಲ್ಲಿ ಮತ್ತು ವೈಯಕ್ತಿಕವಾಗಿ ಶೆಟ್ಟರು ಉತ್ತಮ ಸಾಧನೆ ಮಾಡಿದ್ದಾರೆ. ಎಲ್‌ಐಸಿಯ ಮೂಲಕ ಹಲವು ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಎಚ್.ಎಸ್.ಮುದ್ದೇಗೌಡ ಹಾಗೂ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿದರು. ಎಲ್‌ಐಸಿ ಆಫ್ ಇಂಡಿಯಾದ ಮಂಡ್ಯ ಶಾಖೆಯ ಹಿರಿಯ ಶಾಖಾಧಿಕಾರಿ ಸಿ.ಶುಭಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಭಾಗೀಯ ಕಚೇರಿಯ ಸೇಲ್ಸ್ ಮ್ಯಾನೇಜರ್ ಕೆ.ಶ್ರೀಕಾಂತ್, ಸಹಾಯಕ ಶಾಖಾಧಿಕಾರಿ ಆರ್.ಜಯಶಂಕರ್, ವೈ.ಬಿ.ಮೋಹನ್‌ಕುಮಾರ್ ಇತರರಿದ್ದರು. ಇದೇ ವೇಳೆ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಶೆಟ್ಟಿ ಮತ್ತು ಪತ್ನಿ ಅನಿತಾ ಅವರನ್ನು ಅಭಿನಂದಿಸಲಾಯಿತು.