ವ್ಯಕಿತ್ವ ವಿಕಸನಗೊಳಿಸುವ ಸ್ವಾನುಭವ: ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಹೇಳಿಕೆ

Congratulatory ceremony Mandya
Published on

ಮಂಡ್ಯ: ಸ್ವಾನುಭವ, ಪರಾನುಭವ ಹಾಗೂ ಲೋಕಾನುಭವಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಅನುಭವಗಳ ಮೂಟೆಯ ಸಾಧಕ ಗೊರವಾಲೆ ಚಂದ್ರಶೇಖರ್ ಎಂದು ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಹೇಳಿದರು.

ನಗರದ ಸ್ಕಿಲ್‌ಫರ್ನ್ ಮಲ್ಟಿಮೀಡಿಯ ಅಕಾಡೆಮಿ ಕುವೆಂಪು ವೇದಿಕೆಯಲ್ಲಿ ವಿಕಾಸ ಟ್ರಸ್ಟ್, ಮಾರ್ಗದರ್ಶಿ ಟ್ರಸ್ಟ್ ಮತ್ತು ಹೊಂಗೆತೋಪು ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಜಾನಪದ ಕಲಾವಿದ ಗೊರವಾಲೆ ಚಂದ್ರಶೇಖರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಚೆಂಡನ್ನು ಎಷ್ಟು ಬಲವಾಗಿ ನೆಲಕ್ಕೆ ಅಪ್ಪಳಿಸುತ್ತೇವೆಯೋ, ಅಷ್ಟೇ ಎತ್ತರಕ್ಕೆ ಅದು ಚಿಮ್ಮುವುದು. ಹಾಗೆಯೇ ಎಲ್ಲ ಕಷ್ಟಗಳನ್ನು ಅನುಭವಿಸಿದವರೆ ಅಂತಿಮವಾಗಿ ಉನ್ನತವಾದುದ್ದನ್ನು ಪಡೆಯುತ್ತಾರೆ. ಹೀಗೆ ಎಲ್ಲ ಪೆಟ್ಟುಗಳನ್ನು ತಿಂದ ಗೊರವಾಲೆ ಚಂದ್ರಶೇಖರ್ ಜಾನಪದ ಅಕಾಡೆಮಿಯ ಒಳಹೊಕ್ಕು ಈಗ ವಿಶ್ವವಿದ್ಯಾಲಯದ ಮೆಟ್ಟಿಲು ಏರಿದ್ದಾರೆ. ಅವರ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.

ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾತನಾಡಿ, ಅರ್ಹ ವ್ಯಕ್ತಿಗೆ ಅರ್ಹ ಹುದ್ದೆ ದೊರಕಿದೆ. ಬಹುಮುಖ ಪ್ರತಿಭೆಯ ಚಂದ್ರಶೇಖರ್ ಅವರು ತಮಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜಾನಪದ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಲಿ ಎಂದು ಆಶಿಸಿದರು.

ಕನ್ನಡ ಉಪನ್ಯಾಸಕ ಲೋಕೇಶ ಬೆಕ್ಕಳಲೆ, ವಕೀಲ ಎಚ್.ಜೆ.ಮನೋಹರ್ ಮಾತನಾಡಿದರು. ಪತ್ರಕರ್ತ ಶಂಭುಗೌಡ, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ.ಲೋಕೇಶ್, ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಕೊತ್ತತ್ತಿರಾಜು, ಶ್ರೀನಿವಾಸ ರಾಘವಾಚಾರ್, ಉಮಾಶಂಕರ್, ಮಧುಸೂದನ್ ದಾಸ್, ಚಂದ್ರಶೇಖರ ದ.ಕೋ.ಹಳ್ಳಿ, ನಾ.ಲೋಕೇಶ ಸ್ಥಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net