ಅ.14 ರಂದು ಪಾನ ಮುಕ್ತರಿಗೆ ಅಭಿನಂದನಾ ಸಮಾರಂಭ

mohana nayak
mohana nayak
Published on

ರಾಯಚೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಮಧ್ಯಪಾನ ಸಂಯಮ ಮಂಡಳಿ ವತಿಯಿಂದ ಅ.14 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗಾಂಧಿ ಜಯಂತಿ, ಜಾಥಾ ಹಾಗೂ ಪಾನ ಮುಕ್ತರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಜನಜಾಗೃತಿ ವೇದಿಕೆ ನಿರ್ದೇಶಕ ಮೋಹನ ನಾಯ್ಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ದುಶ್ಚಟಗಳಿಂದ ಜನರನ್ನು ಮುಕ್ತಗೊಳಿಸಲು 19 ನೂರು ಶಿಬಿರಗಳನ್ನು ನಡೆಸಿ 1 ಲಕ್ಷ 19 ಸಾವಿರ ಜನರನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ. 10 ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ. 9500 ಸ್ವಯಂಸೇವಕರು ಕಳೆದ ಮೂರು ವರ್ಷಗಳಲಿ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಗಾಂಧಿ ಜಯಂತಿ ಅಂಗವಾಗಿ ಪಾನಮುಕ್ತರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು ಕಾರ್ಯಕ್ರಮದ ಸಾನಿಧ್ಯವನ್ನು ಸೋಮವಾರಪೇಟೆ ಹೀರೆಮಠ ಶ್ರೀ ಆಭಿನವ ರಾಚೋಟಿ ಶಿವಾಚಾರ್ಯರು ವಹಿಸಲಿದ್ದಾರೆ. ನಗರ ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ನಿತೀಶ.ಕೆ. ಎಸ್‌ಪಿ ಎಂ.ಪುಟ್ಟಮಾದಯ್ಯ, ಚಂದ್ರಶೇಖರ, ಮಹಾನಗರ ಪಾಲಿಕೆ ಅಧ್ಯಕ್ಷ ನರಸಮ್ಮ ನರಸಿಂಹಲು ಮಾಡಿಗಿರಿ ಸೇರಿದಂತೆ ಅನೇಕರಯು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಅಮರೇಶ ಮಸ್ಕಿ ,ಅಯ್ಯನಗೌಡ, ವೆಂಕಟೇಶ ಕಾಸರವಳ್ಳಿ, ಎಂ.ತಿಮ್ಮಾರೆಡ್ಡಿ, ಪ್ರಕಾಶ ನಂದಿ, ಆಂಜಿನೇಯ್ಯ.ಯು, ಈರಣ್ಣ ಬಾಯಿದೊಡ್ಡಿ, ಯೋಜನಾಧಿಕಾರಿ ಶಿವಾಜಿ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net