ಸೈನಿಕರಾಗುವ ಅವಕಾಶ ಎಲ್ಲರಿಗೂ ಸಿಗಲ್ಲ: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿಮತ

Congratulatory ceremony for retired soldiers Mandya
Published on

ಮಂಡ್ಯ: ಸೈನಿಕ ಹುದ್ದೆ ಎಲ್ಲರಿಗೂ ಲಭಿಸುವುದಿಲ್ಲ. ಕೆಲವೇ ಜನರಿಗಷ್ಟೇ ಅವಕಾಶ ಸಿಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

37 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಆರ್‌ಪಿಎಫ್ ಸೈನಿಕ ಪಿ.ಎನ್.ರಮೇಶ್ ಅವರಿಗೆ ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಪಿ.ಎನ್.ರಮೇಶ್ ಅವರು ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ. ಇವರ ಮಾರ್ಗದರ್ಶನವನ್ನು ಇಂದಿನ ಯುವಕರು ಪಡೆದು ಸೇನೆಯಲ್ಲಿ ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.

ನಿವೃತ್ತ ಸೈನಿಕ ಪಿ.ಎನ್.ರಮೇಶ್ ಮಾತನಾಡಿ, ಬಿಹಾರ್‌ನಲ್ಲಿ ತರಬೇತಿ ಪಡೆದು ಪಂಜಾಬ್, ಛತ್ತೀಸ್‌ಗಡ್, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಅಸ್ಸಾಂ, ಬೆಂಗಳೂರು, ಉತ್ತರಪ್ರದೇಶ, ಕೊಯಂಮತ್ತೂರು ಸೇರಿದಂತೆ ಹಲವು ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ನನಗೆ ಗ್ರಾಮಸ್ಥರು, ಮಾಜಿ ಸೈನಿಕರು, ದೇಶಭಕ್ತರು ಸೇರಿ ಸ್ವಾಗತ ಕೋರಿರುವುದು ಸಂತಸ ತಂದಿದೆ ಎಂದರು.

ಸಿದ್ದರಾಜು, ಚೆಲುವಪ್ಪ, ಧನಂಜಯ್, ನಾಗೇಶ್, ಯೋಗೇಶ್, ಅಂಗಡಿ ಸ್ವಾಮಿ, ಗುರುಮೂರ್ತಿ, ವೇಲು, ಆನಂದ್, ಪುನೀತ್, ರಾಘು, ಗಂಗಾಧರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಗಿಡ ನೆಟ್ಟು ನೀರೆರೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net