ಸಮಾನತೆಯ ಗುಣದಿಂದ ಶ್ರೇಯಸ್ಸು : ಪದ್ಮನಾಭ ಆಸ್ರಣ್ಣ ಅಭಿಮತ

New Project (22)
Published on

ಉಳ್ಳಾಲ: ಎಲ್ಲರನ್ನೂ ಸಮಾನವಾಗಿ ಕಂಡು ಸಮಾಜ ಬೆಳೆಸಿದರೆ ನಮಗೆ ಶ್ರೇಯಸ್ಸು ಸಿಗುತ್ತದೆ. ಸತೀಶ್ ಕುಂಪಲ ಅವರಲ್ಲಿರುವ ಸೌಮ್ಯ, ಸಮಾನತೆಯ ಭಾವನೆ, ಕೆಟ್ಟದನ್ನೂ ಒಳ್ಳೆಯ ರೂಪದಲ್ಲಿ ಸ್ವೀಕರಿಸುವ ಗುಣದಿಂದಾಗಿ ಇಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.

ಎರಡನೇ ಬಾರಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಕುಂಪಲ ಅವರಿಗೆ ಕೊಲ್ಯ ಶಾರದಾ ಮಂದಿರದ ಆವರಣದಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಚುನಾವಣಾ ರಾಜಕಾರಣದಲ್ಲಿ ಪಂಚಾಯಿತಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಅನುಭವ ಇರುವ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರಾಗಿ ನೀಡಿದ್ದಾರೆ. ಅವರಿಗೆ ಪಕ್ಷ ಸಂಘಟನೆ, ಜಾತಿಯಾಧಾರದಲ್ಲಿ ನಮ್ಮನ್ನು ಒಡೆಯಲು ಬರುವವರನ್ನು ಎದುರಿಸುವುದು ಸತೀಶ್ ಕುಂಪಲ ಅವರಿಗೆ ಗೊತ್ತಿದೆ ಎಂದರು.

ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ, ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಜಿಲ್ಲಾ ಪ್ರಕೋಷ್ಠ ಸಂಚಾಲಕ ಟಿ.ಜಿ.ರಾಜಾರಾಮ ಭಟ್, ಅಲೆಮಾರಿ ಅರೆಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಉಳಿಯ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಮಾಜಿ ಅಧ್ಯಕ್ಷ ಪ್ರಕಾಶ್ ಯು.ಎಸ್., ಗಟ್ಟಿ ಸಮಾಜದ ಮೇಲ್ಡರು ಹರಿಶ್ಚಂದ್ರ ಗಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮೊಗವೀರ ಸಂಘ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉದ್ಯಮಿ ಸೌಂದರ್ಯ ರಮೇಶ್, ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ., ಸಾಮಾಜಿಕ ಮುಖಂಡ ಭಾಸ್ಕರ ದೇವಸ್ಯ, ಸೋಮೇಶ್ವರ ಪುರಸಭಾ ಸದಸ್ಯ ಮೋಹನ್ ಶೆಟ್ಟಿ, ಧನಲಕ್ಷ್ಮೀ ಗಟ್ಟಿ ಉಪಸ್ಥಿತರಿದ್ದರು.

ಜೀವನ್ ಕುಮಾರ್ ಸ್ವಾಗತಿಸಿದರು. ರವಿಶಂಕರ್ ಸೋಮೇಶ್ವರ ವಂದಿಸಿದರು. ಪ್ರವೀಣ್ ಕುಂಪಲ ನಿರೂಪಿಸಿದರು.

ನನ್ನ ಜೀವದಲ್ಲಿ ಎಂದಿನವರಗೆ ರಕ್ತ ಹರಿಯುತ್ತಿದೆಯೋ ಅಂದಿನವರೆಗೆ ಕಾರ್ಯಚಟುವಟಿಕೆ ತಡೆಯಲು ಅಸಾಧ್ಯ, ಒಂದು ಸಮಯದಲ್ಲಿ ತೆಗಳಿದವರು, ನನ್ನೊಂದಿಗೆ ನಿಂತು ಭಾವಚಿತ್ರ ತೆಗೆಸಿಕೊಳ್ಳಲೂ ಹೆದರುತ್ತಿದ್ದವರು ಇಂದು ಜತೆಗಿದ್ದಾರೆ. ದೇವರು ಕೊಟ್ಟದ್ದು, ಎಂದಿಗೂ ಶಾಶ್ವತ, ತಾಳ್ಮೆಯಿದ್ದಲ್ಲಿ ಅಧಿಕಾರ ತನ್ನಿಂತಾನೇ ಹುಡುಕಿಕೊಂಡು ಬರುತ್ತದೆ. ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ https://www.vijayavani.net/india-paddle-festival-from-tomorrow https://www.vijayavani.net/food-kit-distribution-in-maddadka

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net