ವಿಜಯರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

VJP-30-1
ವಿಜಯಪುರದ ಆದರ್ಶ ನಗರದ ಎಕ್ಸಲೆಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ :ವಿಜಯರತ್ನ’ ಪ್ರಶಸ್ತಿ ಪುರಸ್ಕೃತ ಬಸವರಾಜ ಎಸ್. ಕೌಲಗಿ ಹಾಗೂ ಶಿವಾನಂದ ಎನ್. ಕೆಲೂರ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ ಕೌಲಗಿ, ರಾಜಶೇಖರ ಕೌಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ : ಹೊಸತನದ ಹರಿಕಾರ ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿಮಾಧ್ಯಮ ಕೊಡಮಾಡುವ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ ಪುರಸ್ಕೃತರಾದ ಎಕ್ಸಲೆಂಟ್ ಸಂಸ್ಥೆ ಸಂಸ್ಥಾಪಕ ಚೇರಮನ್ ಬಸವರಾಜ ಎಸ್. ಕೌಲಗಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಾನಂದ ಎನ್. ಕೆಲೂರ ಅವರಿಗೆ ಆದರ್ಶ ನಗರದ ಎಕ್ಸಲೆಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸಿಬ್ಬಂದಿ ಶನಿವಾರ ಸನ್ಮಾನಿಸಿ ಗೌರವಿಸಿದರು.

ಚೇರಮನ್ ಬಸವರಾಜ ಎಸ್. ಕೌಲಗಿ ಮಾತನಾಡಿ, ಪ್ರತಿ ಯಶಸ್ಸಿಗೂ ಸಾಧಕರ ನಡೆ ಅತ್ಯಂತ ಮಾರ್ಗದರ್ಶಿ. ಪ್ರತಿಯೊಬ್ಬ ಸಾಧಕರ ಜೀವನವು ನಮ್ಮೆಲ್ಲರಿಗೂ ದಾರಿದೀಪ. ಶ್ರೇಷ್ಠವಾದುದನ್ನು ಸಾಧಿಸಲು ಸಾಧಕರು ಕಂಡುಕೊಂಡ ಯಶಸ್ಸಿನ ಸೂತ್ರಗಳು. ಅವರು ಎದುರಿಸಿದ ಏಳು ಬೀಳುಗಳು, ಪುನರಾವರ್ತನೆಯಾದ ಅವರ ಪ್ರಯತ್ನಗಳು ಇಂದಿನ ನಮ್ಮ ಸಾಧನೆಗೆ ಸ್ಫೂರ್ತಿಯಾಗಿವೆ ಎಂದರು.

ಸನ್ಮಾನ ಸ್ವೀಕರಿಸಿದ ಶಿವಾನಂದ ಎನ್. ಕೆಲೂರ ಮಾತನಾಡಿ, ನಿಶ್ಚಿತ ಗುರಿ ಸಾಧನೆಯಲ್ಲಿ ಶ್ರದ್ಧಾ ಪೂರ್ವಕ ಪ್ರಯತ್ನದೊಂದಿಗೆ ಸಾಗಿದರೆ ಉತ್ತಮ ಫಲಿತಾಂಶ ನಿಶ್ಚಿತ. ನಿರಂತರ ಪ್ರಯತ್ನವೇ ಸಾಧನೆಯ ರಹದಾರಿ. ಗುರಿ ಸಾಧನೆಗೆ ವಿದ್ಯಾರ್ಥಿಗಳು ಉತ್ತಮ ಮಾರ್ಗ ಅನುಸರಿಸಬೇಕೆಂದರು.

ಸಂಸ್ಥೆ ನಿರ್ದೇಶಕ ಮಂಜುನಾಥ ಕೌಲಗಿ, ಗೌರವ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿದರು. ಮುಖ್ಯ ಗುರು ಎಂ.ಐ. ಬಿರಾದಾರ, ಸೀತಾ ದಿಕ್ಷೀತ್, ತೇಜಸ್ವಿನಿ ಮಾಳಬಾಗಿ, ಅಭಿನಯ ನಾಟಿಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net