ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

17 HRS 01
Published on

ಹಿರೀಸಾವೆ: ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಇದಕ್ಕೂ ಮುನ್ನ ಕಾಳಿಕಾಂಬದೇವಿ ದೇಗುಲವನ್ನು ಮುಂಜಾನೆಯೇ ಹಸಿರು ಚಪ್ಪರ ಹಾಕಿ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿಶ್ವಕರ್ಮರ ಪ್ರತಿಮೆ, ಕಾಳಿಕಾಂಬ ದೇವಿ ಹಾಗೂ ಕಮಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಾದ ಕಿಶೋರ್, ಬ್ರಹ್ಮೇಶ್, ನಂದಕುಮಾರ್ ಹಾಗೂ ಶಿವರಂಜಿನಿ ಅವರನ್ನು ಸಮಾಜದ ಅಧ್ಯಕ್ಷ ಸಿ.ಪಿ.ನಾಗೇಂದ್ರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸಮಾಜದ ಹೋಬಳಿಯ ಅಧ್ಯಕ್ಷ ಸಿ.ಪಿ.ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀನಾಥಬಾಬು, ಎಎಸ್‌ಐ ಲೋಕೇಶ್, ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶೈಲಶ್ರೀ ದೇವರಾಜ್, ಗೌರವ ಅಧ್ಯಕ್ಷ ಬಸವರಾಜ್, ಮುಖಂಡರಾದ ಗಣೇಶಾಚಾರ್, ದೇವರಾಜು, ಪರಮೇಶ್, ಉಮೇಶ್, ಕೃಷ್ಣ, ಎ.ಪಿ.ಬಸವರಾಜು, ವಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net