ಗುಂಪೆ ಹವ್ಯಕ ವಲಯದಿಂದ ಪ್ರತಿಭಾನ್ವಿತರಿಗೆ ಅಭಿನಂದನೆ

New Project (49)
Published on

ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆ ಭಾನುವಾರ ಧರ್ಮತ್ತಡ್ಕದ ಗುಂಪೆ ವಲಯ ಕಾರ್ಯಾಲಯದಲ್ಲಿ ನಡೆಯಿತು.

2024-2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ, ಪ್ಲಸ್ ಟು ತರಗತಿಗಳಲ್ಲಿ ಅತ್ಯುನ್ನತ ಅಂಕ ಗಳಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಎ ಪ್ಲಸ್ ಪಡೆದ ಪವನ್ ರಾಮ ನೇರೋಳು, ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಅಭಿದೀಪ್ ಎಚ್.ಕೆ.ಬೆಜಪ್ಪೆ, ಪ್ರತೀಕ್ಷಾ ಬಾಯಾಡಿ, ಅನಘ ಕೆ.ಕರುವಜೆ, ಪ್ಲಸ್ ಟು ವಿದ್ಯಾರ್ಥಿಗಳಾದ ಅರುಣ ಮರುವಳ, ಆದೀಶ ಕೃಷ್ಣ ಅಮ್ಮಂಕಲ್ಲು ಅವರನ್ನು ಸನ್ಮಾನಿಸಲಾಯಿತು.

ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಕೋಶಾಧಿಕಾರಿ ರಾಜಗೋಪಾಲ ಭಟ್ ಅಮ್ಮಂಕಲ್ಲು, ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ, ಗುರಿಕಾರರಾದ ಗಣಪತಿ ಭಟ್ ಹಳ್ಳಕೊಡ್ಲು, ಸುಬ್ಬ ಭಟ್ ಎಡಕ್ಕಾನ, ಗೋಪಾಲಕೃಷ್ಣ ಭಟ್ ಮಾಣಿ, ವೈದಿಕ ವಿಭಾಗದ ತಿರುಮಲೇಶ್ವರ ಭಟ್ ಮರುವಳ, ಮಾತೃ ವಿಭಾಗದ ಕಾವೇರಿ ಗುಂಪೆ, ಶಿಷ್ಯ ಮಾಧ್ಯಮದ ದಿವ್ಯಾ ಭಾರತಿ ಅಮ್ಮಂಕಲ್ಲು, ವಿದ್ಯಾರ್ಥಿ ವಾಹಿನಿಯ ನಳಿನಿ ಬೆಜಪ್ಪೆ ಉಪಸ್ಥಿತರಿದ್ದರು. ಶಂಕರನಾರಾಯಣ ಭಟ್ ನೇರೋಳು ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net