

ಕೊಳ್ಳೇಗಾಲ: ಪಟ್ಟಣದ ವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಈ ವೇಳೆ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಮಾತನಾಡಿ, ಶ್ರೀ ವಾಸವಿ ವಿದ್ಯಾಸಂಸ್ಥೆಯ ಮೇಲೆ ಪಾಲಕರು ಅತೀ ಹೆಚ್ಚು ವಿಶ್ವಾಸ ಹೊಂದಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಆ ವಿಶ್ವಾಸವನ್ನು, ನಮ್ಮ ವಿದ್ಯಾಸಂಸ್ಥೆಯ ಉಳಿಸಿಕೊಂಡು ವಿದ್ಯೆಯ ಜತೆ ಸಂಸ್ಕಾರವನ್ನು ಕಲಿಸುತ್ತಿದೆ. ಇದಕ್ಕೆ ಉದಾಹರಣೆ ಎಸ್ಸೆಸ್ಸೆಲ್ಸಿ ಸಿಬಿಎಸ್‌ಸಿ ಫಲಿತಾಂಶ ಎಂದರು.
ಮಕ್ಕಳು ಸಣ್ಣ ಗುರಿಯನ್ನು ಇಟ್ಟುಕೊಳ್ಳದೆ, ದೊಡ್ಡ ಗುರಿ ಹೊಂದಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಬಹಳ ಶ್ರಮ ಪಡಬೇಕಾಗುತ್ತದೆ. ಇದಕ್ಕೆ ಪಾಲಕರು ಸಾಥ್ ನೀಡಬೇಕು ಎಂದು ಕಿವಿಮಾತು ಹೇಳಿದರು.
ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಪಿ. ಜಿ.ಶ್ರೀಧರ್, ನಿರ್ದೇಶಕ ರಾಜೇಶ್, ಸಂಯೋಜಕ ಮಧುರಾಜೇಶ್, ಭಾವನಾ ಶಶಿಧರ್, ಪ್ರಾಂಶುಪಾಲ ದಯಾಪ್ರಸಾದ್, ಶಾಲಾ ಮುಖ್ಯಶಿಕ್ಷಕಿ ಗೀತಾ, ಶ್ರೀವಾಸವಿ ಸಂಯುಕ್ತ ಕಾಲೇಜಿನ ವಾಸವಾಂಬ ಮತ್ತಿತರಿದ್ದರು.