ಕೆ.ಎಂ.ದೊಡ್ಡಿ: ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಮ್ಮ ಜ್ಞಾನಮುದ್ರ ವಿದ್ಯಾಮಂದಿರ ಶಾಲೆ ತಂಡ ಮೈಸೂರು ವಿಭಾಗದಿಂದ ಪ್ರತಿನಿಧಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದೆ ಶಾಲೆಯ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 14 ವರ್ಷದ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೆಣಸಗೆರೆಯ ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಗಳ ತಂಡ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದು, ಬಹುಮಾನ ಗಳಿಸಿದ ತಂಡ ಮತ್ತು ತರಬೇತಿದಾರರನ್ನು ಸೋಮವಾರ ಅಭಿನಂದಿಸಿ ಮಾತನಾಡಿದರು.
ನಮ್ಮ ಶಾಲೆಯು ಶಿಕ್ಷಣದ ಜತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಾಲಕರು ಸಹ ಮಕ್ಕಳನ್ನು ಭಾಗವಹಿಸಲು ಪ್ರೋತ್ಸಾಹಿಸುವ ಮೂಲಕ ಮಕ್ಕಳ ಪ್ರಗತಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಹೊಸ ಶೈಕ್ಷಣಿಕ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾ ಬಂದಿದ್ದು ಕ್ರೀಡೆ ಮತ್ತು ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕ್ರೀಡೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗಿ ರೂಪಿಸಬಹುದು. ಪ್ರಾಥಮಿಕ ಶಿಕ್ಷಣದಲ್ಲೇ ಸಾಮಾನ್ಯ ಜ್ಞಾನದ ಮಾಹಿತಿ ತಿಳಿಸಿದರೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂಬುವುದು ಸಂಸ್ಥೆಯ ಉದ್ದೇಶ ಎಂದು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷೆ ಸೌಮ್ಯಾ ರಾಜೇಶ್, ಆಡಳಿತ ಮಂಡಳಿಯ ಸದಸ್ಯೆ ತೇಜಸ್ವಿನಿ, ಪ್ರಭಾವತಿ ಸುರೇಶ್, ಮುಖ್ಯಶಿಕ್ಷಕಿ ಕೆ.ಎಸ್.ಶ್ರುತಿ, ದೈಹಿಕ ಶಿಕ್ಷಣ ಶಿಕ್ಷಕ ಡಿ.ಮನು ಇದ್ದರು.
===========
6ಏಒಆ-1 ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿದ ಮೆಣಸಗೆರೆಯ ಜ್ಞಾನ ಮುದ್ರ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಡಾ.ಸೌಮ್ಯಾ ರಾಜೇಶ್, ಶಿವಮ್ಮ ಶಿವಕುಮಾರ್, ತೇಜಸ್ವಿನಿ ಪ್ರಭಾವತಿ ಸುರೇಶ್ ಇದ್ದರು.
==================