

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳು ಜೀವನ ಪಾಠ ಶಾಲೆಯಲ್ಲಿ ಕಲಿಯುತ್ತಾರೆ. ಅವರು ಎಲ್ಲ ರಂಗದಲ್ಲೂ ಯಶಸ್ಸು ಕಾಣುತ್ತಾರೆ. ಹಾಗಾಗಿ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳಲ್ಲಿ ಯಾವುದೇ ಕೀಳರಿಮೆ ಸಲ್ಲದು ಎಂದು ಉದ್ಯಮಿ ಮೋಹನ್ ಕುಮಾರ್ ಹೇಳಿದರು.
ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿಗಳ ಪಾಲಕರಿಗೆ ಶೈಕ್ಷಣಿಕ ತರಬೇತಿ, 2024-25ರ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಸಕ ಹರೀಶ್ ಪೂಂಜ ಮಾತನಾಡಿದರು. ಫೆಡರಲ್ ಬ್ಯಾಂಕ್ ಕೊಯ್ಯೂರು ಶಾಖೆ ಆಫೀಸರ್ ಸುವಾಸ್ ಮತ್ತು ತಂಡದವರು ಬ್ಯಾಂಕ್ ಸೌಲಭ್ಯಗಳ ಬಗ್ಗೆ ತಿಳಿಸಿದರು. ಬ್ಯಾಂಕ್ ವತಿಯಿಂದ ಶಿಕ್ಷಕರನ್ನು ಗೌರವಿಸಲಾಯಿತು. ಕಳೆದ ವಷರ್ ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಐಶ್ವರ್ಯಾ, ಪಂಚಮಿ, ಪೃಥ್ವಿ ಅವರನ್ನು ಗೌರವಿಸಲಾಯಿತು. ಪ್ರಸಕ್ತ ವಷರ್ ಶಾಲೆಯಲ್ಲಿ ಕಲಿಯುತ್ತಿರುವ 139 ವಿದ್ಯಾರ್ಥಿಗಳಿಗೆ ಬ್ಯಾಗ್, ಕೊಡೆ ವಿತರಿಸಲಾಯಿತು.
ಕೊಯ್ಯೂರು ಗ್ರಾಪಂ ಅಧ್ಯಕ್ಷೆ ದಯಾಮಣಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಜ್ಞಾನೇಶ್, ಎಸ್‌ಡಿಎಂಸಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಗ್ರಾಪಂ ಸದಸ್ಯರಾದ ಯಶವಂತ್ ಗೌಡ ಪೂರ್ಯಾಳ, ಹೇಮ, ಎಸ್‌ಡಿಎಂಸಿ ಸದಸ್ಯರಾದ ಶೇಖರ ಗೌಡ, ದಿನೇಶ್, ಗುಲಾಬಿ, ತಾಪಂ ಮಾಜಿ ಉಪಾಧ್ಯಕ್ಷ ಗೀತಾ ಕೊಯ್ಯೂರು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೋಹನ ಗೌಡ, ಹಿರಿಯ ವಿದ್ಯಾರ್ಥಿ ದಿನೇಶ್ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು. ಬೇಬಿ ವಂದಿಸಿದರು. ರಾಮಚಂದ್ರ ದೊಡಮನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸುಧಾಕರ ಶೆಟ್ಟಿ, ಮೋಹನದಾಸ, ಪ್ರವೀಣ ಕುಮಾರ್, ಗೀತಾ ಉಡುಪಿ, ದೀಪ್ತಿ ಹೆಗ್ಡೆ, ದೀಪಿಕಾ ಸಹಕರಿಸಿದರು.
ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅದಕ್ಕೆ ಶಿಕ್ಷಕರು ಪ್ರೇರಣೆ ನೀಡುತ್ತಾರೆ. ಅಂತಹ ಶಿಕ್ಷಕ ವೃಂದ ಈ ಶಾಲೆಯಲ್ಲಿ ಇರುವುದರಿಂದ ಶಾಲೆ ರಾಜ್ಯಮಟ್ಟದಲ್ಲಿ ಇಂದು ಮುಖ್ಯ ಮಂತ್ರಿಯವರಿಂದ ಅಭಿನಂದನೆಗೆ ಪಾತ್ರವಾಗಿದೆ. ಹರೀಶ್ ಪೂಂಜ, ಶಾಸಕರು