ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಅಭಿನಂದನೆ

16-KGL-3
10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕೊಳ್ಳೇಗಾಲದ ಶ್ರೀ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಎ.ಡಿ.ಕುಮಾರ ಕೃಷ್ಣ, ಡಾ.ಪಿ.ಜಿ.ಶ್ರೀಧರ್, ಡಾ.ಸಿ.ಪಿ.ಶರತ್, ಡಾ. ಆಶಿಕ್ ವಿ ಓಲೈಟಿ, ಡಾ.ಎಸ್. ದಯಾಪ್ರಸಾದ್ ಇದ್ದರು.
Published on

ಕೊಳ್ಳೇಗಾಲ: ಪಟ್ಟಣದ ಶ್ರೀ ವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಸಿ ವಿಭಾಗದ 10ನೇ ತರಗತಿ ಪರೀಕ್ಷೆಯಲ್ಲಿ ಉರ್ತ್ತೀಣರಾಗುವ ಮೂಲಕ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.

ವಿದ್ಯಾ ಸಂಸ್ಥೆ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಮಾತನಾಡಿ, ಸಿಬಿಎಸ್‌ಸಿ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಉತ್ತಮ ಫಲಿತಾಂಶ ನೀಡಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಜಂಟಿ ಕಾರ್ಯದರ್ಶಿ ಡಾ.ಸಿ.ಪಿ.ಶರತ್, ನಿರ್ದೇಶಕ ಡಾ.ಆಶಿಕ್ ವಿ.ಓಲೈಟಿ, ಪ್ರಾಂಶುಪಾಲ ಡಾ.ಎಸ್.ದಯಾಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net