ಆಪರೇಷನ್ ಸಿಂಧೂರ ವಿಜಯದ ಸೈನಿಕರಿಗೆ ಅಭಿನಂದನೆ

dhp tiranga
ದೇವರಹಿಪ್ಪರಗಿ ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಆಪರೇಷನ್ ಸಿಂಧೂರ ವಿಜಯದ ಅಂಗವಾಗಿ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು. ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಗುರುಶಾಂತವೀರ ಸ್ವಾಮೀಜಿ, ಜಡಿಸಿದ್ಧೇಶ್ವರ ಶ್ರೀಗಳು ರಾಮಪ್ಪ ಖಾನಾಪುರ, ಗುರಲಿಂಗಪ್ಪ ಅಂಗಡಿ ಇತರರಿದ್ದರು.
Published on

ದೇವರಹಿಪ್ಪರಗಿ: ರಾಷ್ಟ್ರಾದ್ಯಂತ ತಿರಂಗಾ ಯಾತ್ರೆ ಮೂಲಕ ಆಪರೇಷನ್ ಸಿಂಧೂರ ವಿಜಯಕ್ಕೆ ಕಾರಣರಾದ ದೇಶದ ಹೆಮ್ಮೆಯ ಸೈನಿಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರಲ್ಲಿ ದೇಶ ನಿಮ್ಮೊಂದಿಗೆ ಇದೆ ಎಂಬ ಸಂದೇಶ ಸಾರಲಾಗುತ್ತಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಮಳೆಯ ನಡುವೆಯೂ ನಡೆದ ತಿರಂಗಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಭೀಕರ ಭಯೋತ್ಪಾಧಕ ದಾಳಿಗೆ ಉತ್ತರವಾಗಿ ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ. ಅವರ ಈ ಸಾಧನೆಗೆ ನಮ್ಮ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಇಡೀ ದೇಶದ ಜನತೆ ಸರ್ಕಾರ ಹಾಗೂ ಸೈನ್ಯದೊಂದಿಗೆ ಇದೆ ಎಂಬುದನ್ನು ಸಾರೋಣ ಎಂದರು.

ನಿವೃತ್ತ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ರಾಮಪ್ಪ ಖಾನಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಇಟಗಿ-ಸಾತಿಹಾಳ ಮಠದ ಗುರುಶಾಂತವೀರ ಸ್ವಾಮೀಜಿ ಹಾಗೂ ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

ನಿವೃತ್ತ ಸೈನಿಕ ಬಸವರಾಜ ಕುಂಬಾರ, ಎಂ.ಕೆ. ಚವ್ಹಾಣ, ಬಿ.ಎ. ಪಾಟೀಲ, ಎಂ.ಬಿ. ಹಂಚಲಿ, ನಿಂಗಪ್ಪ ಹಡಪದ, ಶರಣಯ್ಯ ಗಣಾಚಾರಿ, ರುದ್ರಪ್ಪ ಹಿಂದಿಮನಿ, ಪಿ.ಡಿ. ಖಾನಾಪೂರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಜಿಲ್ಲಾ ಕಾಯದರ್ಶಿ ರಮೇಶ ಮಸಬಿನಾಳ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮಂಡಲ ಮಾಜಿ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಪ್ರಕಾಶ ದೊಡಮನಿ, ಸೋಮಶೇಖರ ಹಿರೇಮಠ, ಸೋಮು ದೇವೂರ, ದಾವೂದ್ ಇನಾಮದಾರ್, ಶರಣು ದಳವಾಯಿ, ರಮೇಶ ಈಳಗೇರ, ಪಿಂಟೂ ಭಾಸುತ್ಕರ್, ಮಹಾಂತೇಶ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net