ಸಮಸ್ಯೆಗಳಿದ್ದರೆ ನೇರವಾಗಿ ಬಂದು ಚರ್ಚಿಸಿ: ನೂತನ ಡಿಡಿಪಿಐ ಎಚ್.ಶಿವರಾಮೇಗೌಡ ಹೇಳಿಕೆ

1
Published on

ಮಂಡ್ಯ: ಶಿಕ್ಷಕರು ನಿಮ್ಮ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಶಾಲಾ ಅವಧಿಯ ನಂತರ ಭೇಟಿ ಮಾಡಿ ಬಗೆಹರಿಸಲಾಗುವುದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಮಂಡ್ಯ ಉತ್ತರ ವಲಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಕರ್ತವ್ಯಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದು ಬೇಡ. ಶಾಲಾ ಅವಧಿ ಮುಗಿದ ಬಳಿಕ ನೇರ ಭೇಟಿ ಮಾಡಬಹುದು. ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಿದರೆ ಗುಣಾತ್ಮಕ ಶಿಕ್ಷಣ ದೊರೆಯುವುದು. ನಿಮ್ಮ ಶೈಕ್ಷಣಿಕ ಹಾಗೂ ಅಡಳಿತ ಸೇವೆಗೆ ಸದಾ ಅಧಿಕಾರಿಗಳ ನೆರವಿದೆ ಎಂದರು.

ಮಂಡ್ಯ ಉತ್ತರ ವಲಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ಶಶಿಧರ ಈಚಗೆರೆ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ರವೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮು, ಜಿಲ್ಲಾ ಕಾರ್ಯದರ್ಶಿ ಜಯರಾಮ, ತಾಲೂಕು ಪದಾಧಿಕಾರಿಗಳಾದ ಶಿವಣ್ಣ, ಶಿವಕುಮಾರ್, ಕೇಶವ, ಗೋವಿಂದ್, ಶಿವರಾಮು, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net