

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ನೂತನ ಸದಸ್ಯರಾಗಿ ನೇಮಕವಾಗಿರುವ ಪಿ.ಎಂ.ಸಂದೀಪ್ ಮತ್ತು ಲೋಕೇಶ್ ಊರುಬೈಲು ಅವರನ್ನು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಶುಕ್ರವಾರ ಅಭಿನಂದಿಸಿದರು.
ನಗರದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನೂತನ ಸದಸ್ಯರನ್ನು ಅಭಿನಂದಿಸಿ, ಚರ್ಚಿಸಿದರು. ನೂತನ ಸದಸ್ಯರಾಗಿ ನೇಮಕವಾಗಿರುವ ಪಿ.ಎಂ.ಸಂದೀಪ್ ಅವರು ಮರಗೋಡು ಗ್ರಾಮದವರಾಗಿದ್ದರೆ, ಲೋಕೇಶ್ ಊರುಬೈಲು ಅವರು ಚೆಂಬು ಗ್ರಾಮದವರಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಅಕಾಡೆಮಿ ಮಾಜಿ ಅಧ್ಯಕ್ಷ ದಿ.ದೇವಿಪ್ರಸಾದ್, ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಲಕ್ಷ್ಮಿನಾರಾಯಣ ಕಜೆಗದ್ದೆ, ಜಯರಾಮ್ ಅವರನ್ನು ಇತ್ತೀಚೆಗೆ ಭೇಟಿಯಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಚಟುವಟಿಕೆಗೆ ಅಗತ್ಯ ಸಹಕಾರಕ್ಕೆ ಕೋರಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾಹಿತಿ ನೀಡಿದರು.