ಒಳಮೀಸಲಿಗೆ ಶ್ರಮಿಸಿದ ಶಾಸಕರಿಗೆ ಅಭಿನಂದನೆ

04 HANUR 4
ಹನೂರಿನಲ್ಲಿ ಮಾದಿಗ ಸಮುದಾಯದ ಮುಖಂಡರು ಶಾಸಕ ಎಂ.ಆರ್ ಮಂಜುನಾಥ್ ಅವರನ್ನು ಸನ್ಮಾನಿಸಿದರು. ಗುರುಸ್ವಾಮಿ, ವೆಂಕಟೇಶ್, ರಾಚಪ್ಪ, ಕರಿಯಪ್ಪ, ಶಿವು ಇತರರು ಇದ್ದರು.
Published on

ಹನೂರು : ಒಳ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿ ಸಹಕರಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರನ್ನು ಗುರುವಾರ ಮಾದಿಗ ಸಮುದಾಯದ ಮುಖಂಡರು ಪಟ್ಟಣದ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು.

ಈ ವೇಳೆ ಯುವ ಮುಖಂಡ ಚನ್ನಾಲಿಂಗನಹಳ್ಳಿ ರಾಚಪ್ಪ ಮಾತನಾಡಿ, ಶಾಸಕ ಎಂ.ಆರ್ ಮಂಜುನಾಥ್ ಅವರು ಮಾದಿಗ ಸಮುದಾಯ ಮೇಲೆ ವಿಶೇಷ ಕಾಳಜಿಯನ್ನು ಹೊಂದಿದ್ದು, ಉತ್ತಮ ಒಡನಾಟವನ್ನು ಇರಿಸಿಕೊಂಡಿದ್ದಾರೆ. ಸಮುದಾಯದ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಮಾದಿಗ ಒಳ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಲು ಸಹಕಾರ ನೀಡಿದ್ದಾರೆ. ಇನ್ನು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸಮುದಾಯದ ಗ್ರಾಮಗಳಿಗೆ ಅನುದಾನ ನೀಡುವುದರ ಮೂಲಕ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಡಾ. ಬಾಬು ಜಗಜೀವನರಾಮ್ ಕಲಾ ಸಂಘದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಹನೂರಿನ ಗುರುಸ್ವಾಮಿ, ಚನ್ನಾಲಿಂಗನಹಳ್ಳಿಯ ಮಾದೇಶ್, ಕರಿಯಪ್ಪ, ಕರಿಯನಪುರದ ನಾಗೇಂದ್ರ, ರಾಜು, ಪ್ರಶಾಂತ್, ಕುಮಾರ್, ಪಾಳ್ಯದ ಶಿವು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net