ಕರೊನಾ ವಾರಿಯರ್ಸ್‌ಗೆ ಅಭಿನಂದನೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ಹೂಮಳೆ

18 dhl Karona wariyars news ph-1
Published on

ದೇವನಹಳ್ಳಿ: ರಾಜ್ಯದಲ್ಲಿ ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಅದೇ ರೀತಿ ಸರ್ಕಾರದ ಯಶಸ್ಸಿಗೆ ಕರೊನಾ ವಾರಿಯರ್ಸ್‌ಗಳ ಪಾತ್ರ ಮುಖ್ಯವಾಗಿದೆ. ಪ್ರಾಣವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.

ದೇವನಹಳ್ಳಿ ಪಟ್ಟಣದ ಸರ್ಕಾರಿ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಪುಷ್ಪಾರ್ಚನೆ ಮಾಡಿ ಅಭಿನಂದಿಸಿದರು

ದೇಶವೇ ಮೆಚ್ಚುವಂತೆ ರಾಜ್ಯದಲ್ಲಿ ವಲಸೆ ಕೋಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ದಿನಸಿ ಹಾಗೂ ಆಹಾರ ವಿತರಣೆ ಮತ್ತಿತರ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಆದರೂ ಕೆಲವರು ಭಯದಿಂದ ತಮ್ಮ ರಾಜ್ಯಗಳತ್ತ ಹೋಗುತ್ತಿದ್ದಾರೆ. ಹಾಗಾಗಿ ಇನ್ನು ಮುಂದಾದರೂರಾಜ್ಯದ ಕೂಲಿಕಾರ್ಮಿಕರನ್ನೇ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಇರುವಷ್ಟು ಕರೊನಾ ಪರೀಕ್ಷಾ ಕೇಂದ್ರಗಳು ಬೇರೆಲ್ಲಿಯೂ ಇಲ್ಲ. ಹಾಗಾಗಿ ಮಾರಣಾಂತಿಕ ವೈರಸ್ ತಡೆಯಲು ಸಾಧ್ಯವಾಗಿದೆ ಎಂದರು. ಪೋಲಿಸರು, ಅರೋಗ್ಯ ಇಲಾಖೆ ಸಿಬ್ಬಂದಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ಕುಟುಂಬದಿಂದ ದೂರ ಉಳಿದು ಈ ಮಹಾಮಾರಿ ತಡೆಗೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಾಥ್ ನೀಡಿದ ಮಾಧ್ಯಮದವರು ಸಹ ಕರೊನಾ ವಾರಿಯರ್ಸ್‌ಗಳು ಎದೆಗುಂದದೆ ಮಾಡಿದ ಸೇವೆ ದೇವರು ಮೆಚ್ಚುವಂತಹುದು ಎಂದರು.

ಕರೊನಾದೊಂದಿಗೆ ಬದುಕಬೇಕಿದೆ: ಕರೊನಾ ಇನ್ನೂ ಎಷ್ಟು ದಿನ ಬಾಧಿಸಲಿದೆ ಗೊತ್ತಿಲ್ಲ. ನಾವೆಲ್ಲ ಕರೊನಾ ಜತೆ ಬದುಕುವುದನ್ನು ಕಲಿಯಬೇಕು. ಈ ವೃರಸ್‌ನ್ನು ಮೆಟ್ಟಿ ನಿಲ್ಲಬೇಕು ಎಂದು ಅಶೋಕ್ ಹೇಳಿದರು. ಗ್ರಾಮಾಂತರ ಜಿಲ್ಲೆಯಲಿ ಕರೊನಾ ಸಂಪೂರ್ಣ ನಿಯಂತ್ರಣದಲ್ಲಿದ್ದು ನಮ್ಮ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದೇನೆ. ಹಸಿರು ವಲಯವಾದರೂ ಎಲ್ಲರೂ ಇನ್ನು ಕೆಲವು ತಿಂಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಸ್ವಲ್ಪ ಎಚ್ಚರ ತಪ್ಪಿದರೂ ಮಹಾಮಾರಿ ಮತ್ತೆ ವಕ್ಕರಿಸಲಿದೆ ಎಚ್ಚರ ಎಂದರು.

ಇದೇ ವೇಳೆ ಎಲ್ಲಾ ಕರೋನ ವಾರಿಯರ್ಸ್‌ಗಳ ಪರವಾಗಿ ಪುರಸಭೆ ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ಕೆ.ಸಂಜಯ್‌ರನ್ನು ಸನ್ಮಾನಿಸಲಾಯಿತು.

ಬಯಪ ಅಧ್ಯಕ್ಷ ಎ.ರವಿ, ರಾಜ್ಯ ಮುಖಂಡ ಎಂ. ನಾರಾಯಣಸ್ವಾಮಿ, ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷೆ.ವಿ.ನಾರಾಯನಸ್ವಾಮಿ, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಎಚ್.ಎಂ.ರವಿಕುಮಾರ್, ತಾಲೂಕು ಅಧ್ಯಕ್ಷ ಸುಂದರೇಶ್ ಸುನಿ, ಪ್ರಧಾನಕಾರ್ಯದರ್ಶಿ ನೀಲೇರಿ ಮಂಜುನಾಥ್, ಬಯಪ ಮಾಜಿ ಅಧ್ಯಕ್ಷ ಎಸ್.ನಾಗೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net