ಶ್ರೀ ಗುರುನರಸಿಂಹ ವಿವಿಧೋದ್ದೇಶ ಸಹಕಾರಿ ಸಭೆ

guru
ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಭೆಯಲ್ಲಿ ಸುಧೀಂದ್ರ ಐತಾಳ ಚಿತ್ರಪಾಡಿ, ಮಂಜುನಾಥ ಗುಂಡ್ಮಿ, ಜಯರಾಮ ಶೆಟ್ಟಿ ಮಣೂರು, ವೆಂಕಟರಮಣ ನಾವಡ, ಲಕ್ಷ್ಮೀ ಕಾರ್ಕಡ, ಅಕ್ಕಯ್ಯ ಮಣೂರು ಅವರನ್ನು ಅಭಿನಂದಿಸಲಾಯಿತು
Published on

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಜರುಗಿತು.
ಸಂಘದ ಅಧ್ಯಕ್ಷ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿ, ಸಂಘ ಆರಂಭದಿಂದಲೂ ಪ್ರಜ್ಞಾವಂತ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ದಕ್ಷ ಆಡಳಿತ ಮಂಡಳಿ ಮಾರ್ಗದರ್ಶನ, ನಿಷ್ಠಾವಂತ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೈಕ್ಷಣಿಕ ವರ್ಷದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲಾವಾರು ವಿದ್ಯಾರ್ಥಿಗಳು, ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು.

ಸಂಘದ ಕಾರ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರಾದ ಸುಧೀಂದ್ರ ಐತಾಳ ಚಿತ್ರಪಾಡಿ, ಮಂಜುನಾಥ ಗುಂಡ್ಮಿ, ಜಯರಾಮ ಶೆಟ್ಟಿ ಮಣೂರು, ವೆಂಕಟರಮಣ ನಾವಡ, ಲಕ್ಷ್ಮೀ ಕಾರ್ಕಡ, ಅಕ್ಕಯ್ಯ ಮಣೂರು ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಸಂಜೀವ ಜಿ., ಮಂಜುನಾಥ ಎಸ್.ಕೆ, ಡಾ.ಕೆ.ಕೃಷ್ಣ ಕಾಂಚನ್, ಕೆ.ಶಂಕರ ಬಂಗೇರ, ವಸಂತ ಶೆಟ್ಟಿ, ವೈ.ಕೃಷ್ಣಮೂರ್ತಿ ಐತಾಳ, ಶಾಂತಾ ಭಟ್ಟ, ನಾಗರತ್ನ ಬಾಯರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಜಿ.ಎಸ್.ಸೋಮಯಾಜಿ ವರದಿ ಮಂಡಿಸಿದರು. ಶಾಂತಾ ಭಟ್ಟ ನಿರ್ದೇಶಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net