ಸಹನಾ ಈಳಗೇರ ರಾಜ್ಯಕ್ಕೆ ಐದನೇ ಸ್ಥಾನ, ಅನುಪಮ ಸಾಧನೆಗೆ ಅಭಿನಂದನೆಗಳ ಮಹಾಪೂರ

SAHABA ILIGER
ಸಹನಾ ಈಳಗೇರ
Published on

ವಿಜಯಪುರ: ಕಳೆದ ಮಾರ್ಚ್‌ನಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿದ್ಯಾರ್ಥಿನಿ ಸಹನಾ ಹುಲಗೇಶ ಈಳಗೇರ ವಿಜ್ಞಾನ ವಿಭಾಗದಲ್ಲಿ ಅನುಪಮ ಸಾಧನೆ ಮೆರೆದಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹನಾ ವಿಜ್ಞಾನ ವಿಭಾಗದಲ್ಲಿ ಶೇ. 99 ಅಂಕ ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಭೌತ ಶಾಸ್ತ್ರ-99, ರಸಾಯನ ಶಾಸ್ತ್ರ-100, ಗಣಿತ-100, ಜೀವಶಾಸ್ತ್ರ-100, ಕನ್ನಡ-99, ಇಂಗ್ಲಿಷ್-96 ಒಟ್ಟು 600ಕ್ಕೆ 594 ಅಂಕ ಪಡೆದು ಸಾಧನೆ ತೋರಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಪಾಲಕರು, ಸಂಬಂಧಿಕರು ಹಾಗೂ ಗುರು-ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಿತೈಶಿಗಳು ಅಭಿನಂದನೆಗಳ ಮಹಾಪೂರ ಹರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net