ಸಂಗೀತ ರತ್ನ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪ್ರೊ.ರಾ.ವಿಶ್ವೇಶ್ವರನ್ ಅಭಿನಂದನೆ

mysore
Published on

ಮೈಸೂರು: ಮೈಸೂರು ಸಂಗೀತ ಸಭೆಗಳ ಒಕ್ಕೂಟದ ವತಿಯಿಂದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ‘ಸಂಗೀತ ರತ್ನ’ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪ್ರೊ.ರಾ.ವಿಶ್ವೇಶ್ವರನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.


ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ವಿಶ್ವೇಶ್ವರನ್ ಅವರು, ಈ ಪ್ರಶಸ್ತಿಯನ್ನು ನನಗೆ ಕೊಟ್ಟಿರುವ ಭಾವ ನನಗಿಲ್ಲ. ಸಂಗೀತದೇವಿಯು ‘ನನ್ನ ಪರವಾಗಿ ಪ್ರಶಸ್ತಿ ಸ್ವೀಕರಿಸು’ ಎಂಬ ಆಜ್ಞೆ ಮಾಡಿದಂತೆ ಭಾಸವಾಗುತ್ತಿದೆ. ಇದು ರಾಜ್ಯ, ಮೈಸೂರಿಗೆ, ಸಂಗೀತ ಕಲಾವಿದರಿಗೆ ಸಲ್ಲಬೇಕಾದ ಗೌರವ ಎಂದರು.


ಪರಂಪರೆಗಳು ಪ್ರತಿಭೆಯನ್ನು ಸೃಷ್ಟಿಸುವುದಿಲ್ಲ. ಅದು ಸ್ವಯಂ ಪ್ರೇರಣೆಯಿಂದ ಸೃಷ್ಟಿಯಾಗಬೇಕು. ಪುರಸ್ಕೃತರ ಪ್ರತಿಭೆ ಗುರುತಿಸಲು ಪಾತ್ರ ಮುಖ್ಯ ಎಂದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇತರರು ಇದ್ದರು.


ಬಳಿಕ ಡಾ.ವಿಶ್ವೇಶ್ವರನ್ ಅವರಿಂದ ವೀಣಾವಾದನ ಕಛೇರಿ ನಡೆಯಿತು. ಮೃದಂಗದಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ, ಘಟದಲ್ಲಿ ಶರತ್‌ಕೌಶಿಕ್ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net