ಶಾಸಕ ಅನಿಲ್ ಚಿಕ್ಕಮಾದುಗೆ ಅಭಿನಂದನೆ

10 SARAG 3
ಮೈಸೂರಿನ ಶಾಸಕ ಅನಿಲ್ ಚಿಕ್ಕಮಾದು ಅವರ ನಿವಾಸಕ್ಕೆ ಕೆ.ಬೆಳತ್ತೂರು ಗ್ರಾಮಸ್ಥರು ತೆರಳಿ ಅಭಿನಂದಿಸಿದರು.
Published on

ಸರಗೂರು : ಶಾಸಕ ಅನಿಲ್ ಚಿಕ್ಕಮಾದು ಅವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕರ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿದ ಕೆ.ಬೆಳತ್ತೂರು ಗ್ರಾಪಂ ಸದಸ್ಯರು ಹಾಗೂ ಮುಖಂಡರು ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಅಭಿನಂದಿಸಿದರು.

ಕೆ.ಬೆಳತ್ತೂರು ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ ಮಾತನಾಡಿ, ತಂದೆ ಮಾಜಿ ಶಾಸಕ ದಿ.ಚಿಕ್ಕಮಾದು ಹಾಗೂ ಮಾಜಿ ಸಂಸದ ಆರ್.ದಿ.ಧ್ರುವನಾರಾಯಣ್ ಅವರ ಶಿಷ್ಯರಾಗಿ ಅವರ ಹಾದಿಯಲ್ಲಿ ನಡೆಯುತ್ತಿರುವ ಅನಿಲ್ ಚಿಕ್ಕಮಾದು ತಾಲೂಕಿನ ಅಭಿವೃದ್ಧಿಕಾರರಾಗಿದ್ದಾರೆ. ಇವರು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ, ಬಿ.ಎಂ.ಪ್ರಕಾಶ್, ನಾಗೇಂದ್ರ, ಗೋಪಾಲ್ ರಾಜು, ಮಂಜುನಾಥ, ಅಂಗಡಿ ಶ್ರೀನಿವಾಸ, ರವಿ, ಕೆಂಪನಾಯಕ, ಟಿ.ಪಿ.ಚಿಕ್ಕಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net