ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್‌ಕುಮಾರ್‌ಗೆ ಅಭಿನಂದನೆ

05M.D.R.1
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸರ್ವೇ ನಂ. 139 ರಲ್ಲಿ 4.17 ಎಕರೆ ಸರ್ಕಾರಿ ಕಟ್ಟೆ ಒತ್ತುವರಿ ತೆರವಿಗೆ ಸಹಕಾರ ನೀಡಿದ ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್‌ಕುಮಾರ್ ಅವರನ್ನು ಗೆಜ್ಜಲಗೆರೆ ಕಾಲನಿ ನಿವಾಸಿಗಳು ಅಭಿನಂದಿಸಿದರು. ಮಂಜುನಾಥ್, ಜಿ.ಪಿ.ಶಿವಲಿಂಗಯ್ಯ, ಜಯವೀರೇಗೌಡ, ಜಿ.ಪಿ.ಪಸನ್ನ, ದೇವರಾಜು ಇದ್ದರು.
Published on

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸರ್ವೇ ನಂಬರ್ 139ರಲ್ಲಿ 4.17 ಎಕರೆ ಸರ್ಕಾರಿ ಕಟ್ಟೆ ಒತ್ತುವರಿ ತೆರವು ಮಾಡಲು ಸಹಕಾರ ನೀಡಿದ ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್‌ಕುಮಾರ್ ಅವರನ್ನು ಗೆಜ್ಜಲಗೆರೆ ಕಾಲನಿ ನಿವಾಸಿಗಳು ಮಂಡ್ಯದಲ್ಲಿ ಅಭಿನಂದಿಸಿದರು.


ಗ್ರಾಮದ ಮುಖಂಡ ಮಂಜುನಾಥ್ ಮಾತನಾಡಿ, ಒತ್ತುವರಿಯಾಗಿದ್ದ ಸರ್ಕಾರಿ ಕಟ್ಟೆಯನ್ನು ತೆರವು ಮಾಡಿ ಗ್ರಾಪಂಗೆ ನೀಡುವ ಮೂಲಕ ಅಧಿಕಾರಿಗಳು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಉಪವಿಭಾಗಿಧಿಕಾರಿ ಶಿವಮೂರ್ತಿ, ಡಿವೈಎಸ್‌ಪಿ ಸುನಿಲ್‌ಕುಮಾರ್, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಒಗ್ಗೂಡಿ ಸರ್ಕಾರಿ ಕಟ್ಟೆಯ ಒತ್ತುವರಿ ತೆರವುಗೊಳಿಸಿ ಅನುಕೂಲ ಕಲ್ಪಿಸಿದ್ದಾರೆ. ಮುಂದೆಯೂ ಇದೇ ರೀತಿ ಒತ್ತುವರಿಯಾಗಿರುವ ಸರ್ಕಾರಿ ಸ್ಥಳಗಳ ರಕ್ಷಣೆಗೆ ಮುಂದಾಗಲಿ ಎಂದ ಅವರು, ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಗೆಜ್ಜಲಗೆರೆ ಕಾಲನಿ ನಿವಾಸಿಗಳಾದ ಜಿಎನ್.ಮಂಜುನಾಥ್, ಜಿ.ಪಿ.ಶಿವಲಿಂಗಯ್ಯ, ಜಯವೀರೇಗೌಡ, ಜಿ.ಪಿ.ಪಸನ್ನ, ದೇವರಾಜು, ಜಯಮ್ಮ, ನಿಂಗಮ್ಮ, ಲಕ್ಷಮ್ಮ, ತಾಯಮ್ಮ, ಲಕ್ಷ್ಮಣ, ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net