ಗೌರವಾಧ್ಯಕ್ಷ ವಿ.ಜಿ.ದ್ಯಾವೇಗೌಡಗೆ ಅಭಿನಂದನೆ

ಫೋಟೋ ಶೀರ್ಷಿಕೆ 5 ಸಿಆರ್_ಪಿ-2ಎ.
ಚನ್ನರಾಯಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಕ ವಿ.ಜಿ.ದ್ಯಾವೇಗೌಡ ಅವರನ್ನು ನೌಕರರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.
Published on

ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ಶಿಕ್ಷಕ ವಿ.ಜಿ. ದ್ಯಾವೇಗೌಡ ಅವರು ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ನೌಕರರ ಸಂಘದ ಕಚೇರಿಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದರು.

ವಿ.ಜಿ.ದ್ಯಾವೇಗೌಡ ಈ ಹಿಂದೆ ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರಾಗಿ ಶಿಕ್ಷಕರ ಪರವಾದ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿದ್ದರು. ತದನಂತರ ಸರ್ಕಾರಿ ನೌಕರರ ಸಂಘದ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರ ಮಾರ್ಗದರ್ಶನ, ಸಲಹೆಗಳು ನೌಕರರ ಸಂಘಕ್ಕೆ ಅವಶ್ಯಕತೆ ಇರುವುದನ್ನು ಮನಗಂಡು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ಕಾರ್ಯದರ್ಶಿ ಸಿ.ಎಂ.ಶಿವಮೂರ್ತಿ, ಖಜಾಂಚಿ ಎಚ್.ಎಂ.ವಿಜಯ್‌ಕುಮಾರ್, ರಾಜ್ಯ ಪರಿಷತ್ತು ಸದಸ್ಯ ಎ.ಎಸ್.ಪೂರ್ಣಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net