

ಶಹಾಬಾದ್: ಗ್ಲೋಬಲ್ ಹ್ಯುಮನ್ ಫೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ತೊನಸನಳ್ಳಿ (ಎಸ್)ಯ ಮಲ್ಲಣ್ಣಪ್ಪ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಮಲ್ಲಣ್ಣಪ್ಪ ಮಹಾರಾಜರಿಗೆ ಗ್ರಾಮಸ್ಥರಿಂದ ಶನಿವಾರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ ಮುಗಳನಾಗಾಂವ್, ಮಲ್ಲಿಕಾರ್ಜುನ ಇಟಗಿ ತಿಳಿಸಿದ್ದಾರೆ.
ಸಂಜೆ 6ಗಂಟೆಗೆ ಹನುಮಾನ ದೇವಸ್ಥಾನದ ಬಳಿ ಸಮಾರಂಭ ಆಯೋಜಿಸಿದ್ದು, ಶ್ರೀ ಚನ್ನವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.