ದಿನೇಶ್ ಗುಂಡೂರಾವ್‌ಗೆ ಅಭಿನಂದನೆ

New Project (10)
Published on

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಸರ್ಕಾರ ಮಂಜೂರುಗೊಳಿಸಿದ್ದು, ಶಾಲೆಯನ್ನು ಮಂಜೂರಾತಿಗೊಳಿಸುವಲ್ಲಿ ಸಂಪೂರ್ಣ ಸಹಕಾರ ನೀಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯನ್ ಮಾಲಾಡಿ, ದ.ಕ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೆಡಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ, ಕಕ್ಕಿಂಜೆ ಎಂ.ಜೆ.ಎಂ ಜುಮಾ ಮಸೀದಿ ಉಪಾಧ್ಯಕ್ಷ ಇಲ್ಯಾಸ್ ಕಕ್ಕಿಂಜೆ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಇಂಟಕ್ ಘಟಕ ಅಧ್ಯಕ್ಷ ಬಿ.ಅಶ್ರ್ ನೆರಿಯ, ಕಕ್ಕಿಂಜೆ ಎಂ.ಜೆ.ಎಂ ಜುಮಾ ಮಸೀದಿ ಗೌರವಾಧ್ಯಕ್ಷ ಕೆ.ಎ.ರಹಿಮಾನ್, ಕಕ್ಕಿಂಜೆ ಅಣಿಯೂರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಖಾದರ್ ಬೀಟಿಗೆ, ಪ್ರಮುಖರಾದ ಸಂಶುದ್ದೀನ್ ಬೀಟಿಗೆ, ಹಕೀಂ ಜಿ.ಕೆ., ಪ್ರಮುಖರಾದ ರತ್ನಕರ ಪೂಜಾರಿ ಚಿಬಿದ್ರೆ, ಜೋಯಿ ಜೋಯಲ್ ಕಾಂಜಾಲ್ ಚಿಬಿದ್ರೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net